ಬೆಂಗಳೂರು, ಅ. 03(DaijiworldNews/PY): ಪ್ರಧಾನಿ ನರೇಂದ್ರ ಮೋದಿ ಅವರ ಮತ್ತೊಂದು ಕಣ್ಣೊರೆಸುವ ತಂತ್ರ. ಬಾಕಿ ಇದ್ದ 6 ತಿಂಗಳ ಸಾಲದ ಕಂತಿನ ಮೇಲಿನ ಚಕ್ರಬಡ್ಡಿ ಮನ್ನಾ ಮಾಡುವ ಕೇಂದ್ರದ ನಡೆ ಮೂಗಿನ ಮೇಲೆ ತುಪ್ಪ ಸವರುವ ಕ್ರಮ ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಮತ್ತೊಂದು ಕಣ್ಣೊರೆಸುವ ತಂತ್ರ. ಬಾಕಿ ಇದ್ದ 6 ತಿಂಗಳ ಸಾಲದ ಕಂತಿನ ಮೇಲಿನ ಚಕ್ರಬಡ್ಡಿ ಮನ್ನಾ ಮಾಡುವ ಕೇಂದ್ರದ ನಡೆ ಮೂಗಿನ ಮೇಲೆ ತುಪ್ಪ ಸವರುವ ಕ್ರಮ. ಇಎಂಐನಲ್ಲಿ ಮೊದಲೇ ಬಡ್ಡಿ ಒಳಗೊಂಡಿರುತ್ತೆ. ಸದ್ಯ ಬಾಕಿ ಉಳಿಸಿಕೊಂಡ ಇಎಂಐಗೂ ಬಡ್ಡಿಯ ಜೊತೆ ಚಕ್ರಬಡ್ಡಿ ವಿಧಿಸುತ್ತಿವೆ. ಚಕ್ರಬಡ್ಡಿ ಮಾತ್ರ ಮನ್ನಾ ಮಾಡಿದರೆ ಪ್ರಯೋಜನವೇನು? ಎಂದು ಕೇಳಿದ್ದಾರೆ.