ಲಖನೌ, ಅ. 03(DaijiworldNews/PY): ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರು ಹತ್ರಸ್ ಅತ್ಯಾಚಾರ ಪ್ರಕರಣದ ತನಿಖೆಯನ್ನುಸಿಬಿಐಗೆ ವಹಿಸಿ ಆದೇಶ ನೀಡಿದ್ದಾರೆ.
ಹತ್ರಸ್ ಅತ್ಯಾಚಾರ ಪ್ರಕರಣವು ಭಾರೀ ಸದ್ದು ಮಾಡುತ್ತಿರುವ ಬೆನ್ನಲ್ಲೇ ಉತ್ತರ ಪ್ರದೇಶ ಸರ್ಕಾರ ಈ ತೀರ್ಮಾನ ತೆಗದುಕೊಂಡಿದೆ.
ಉತ್ತರ ಪ್ರದೇಶದ ಹತ್ರಸ್ನಲ್ಲಿ ಎರಡು ವಾರಗಳ ಹಿಂದೆ ಅಮಾನುಷವಾಗಿ ಸಾಮೂಹಿಕ ಅತ್ಯಾಚಾರ ಮತ್ತು ಚಿತ್ರಹಿಂಸೆಗೊಳಗಾಗಿ ಸಾವನ್ನಪ್ಪಿದ್ದ 19 ವರ್ಷದ ದಲಿತ ಯುವತಿಯ ಮೃತ ದೇಹದ ಅಂತ್ಯ ಸಂಸ್ಕಾರವನ್ನು ಕುಟುಂಬದವರಿಗೆ ಮಾಡಲು ಅವಕಾಶ ನೀಡದೆ ರಾತ್ರೋರಾತ್ರಿ ಪೊಲೀಸರು ಅಂತ್ಯ ಸಂಸ್ಕಾರ ನಡೆಸಿದ್ದರು.