ಮುಂಬೈ, ಅ. 04(DaijiworldNews/PY): ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿಯರಾದ ದೀಪಿಕಾ ಪಡುಕೋಣೆ, ಶ್ರದ್ದಾ ಕಪೂರ್ ಹಾಗೂ ಸಾರಾ ಅಲಿಖಾನ್ ವಿಚಾರಣೆ ನಡೆಸಿದ್ದ ಎನ್ಸಿಬಿ ಅಧಿಕಾರಿ ಕೆಪಿಎಸ್ ಮಲ್ಹೋತ್ರಾಗೆ ಕೊರೊನಾ ದೃಢಪಟ್ಟಿರುವುದಾಗಿ ವರದಿಗಳಿಂದ ತಿಳಿದುಬಂದಿದೆ.
ಸುಶಾಂತ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ರಗ್ಸ್ ನಂಟು ಕಂಡು ಬಂದ ಕಾರಣ ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್, ಶೃದ್ಧಾ ಕಪೂರ್ ಅವರನ್ನು ಎನ್ಸಿಬಿ ವಿಚಾರಣೆ ನಡೆಸಿತ್ತು. ಇದೀಗ ವಿಚಾರಣೆ ನಡೆಸಿದ್ದ ಅಧಿಕಾರಿಗೆ ಕೊರೊನಾ ದೃಢಪಟ್ಟಿದ್ದು, ನಟಿಯರಿಗೆ ಆತಂಕವಾಗಿದೆ.
ಸುಶಾಂತ್ ಸಿಂಗ್ ರಜಪೂತ್ ಅವರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ತಳುಕು ಹಾಕಿಕೊಂಡಿರುವ ಮಾದಕ ದ್ರವ್ಯದ ಬಗ್ಗೆಯೂ ಎನ್ಸಿಬಿ ತನಿಖೆ ನಡೆಸುತ್ತಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ರಗ್ ನಂಟು ಕಂಡುಬಂದ ಹಿನ್ನೆಲೆ ಎನ್ಸಿಬಿಯ ಐದು ಸದಸ್ಯರ ತಂಡವನ್ನು ಮುಂಬೈಗೆ ಕಳುಹಿಸಲಾಗಿದ್ದು, ಈ ತಂಡವನ್ನು ಎನ್ಸಿಬಿಯ ಉಪನಿರ್ದೇಶಕ ಕೆಪಿಎಸ್ ಮಲ್ಹೋತ್ರಾ ಅವರು ಮುನ್ನಡೆಸುತ್ತಿದ್ದಾರೆ.