ಪಟ್ನಾ,ಅ. 04 (DaijiworldNews/HR): ರಾಷ್ಟ್ರೀಯ ಜನತಾ ದಳದ (ಆರ್ಜೆಡಿ) ಮಾಜಿ ರಾಜ್ಯ ಕಾರ್ಯದರ್ಶಿ ಶಕ್ತಿ ಮಲಿಕ್ನನ್ನು ಬಿಹಾರ ಚುನಾವಣೆ ಸಮೀಸುತ್ತಿರುವ ಬೆನ್ನಲ್ಲೇ ಇಂದು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಡಿವೈಎಸ್ಪಿ ಆನಂದ್ ಪಾಂಡೆ, ಶಕ್ತಿ ಮಲಿಕ್ ಅವರನ್ನು ಇಂದು ಬೆಳಿಗ್ಗೆ ಮೂವರು ಆರೋಪಿಗಳು ಗುಂಡಿಕ್ಕಿ ಕೊಂದಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು ತನಿಖೆಯನ್ನು ನಡೆಸಲಾಗುತ್ತಿದೆ' ಎಂಬುದಾಗಿ ತಿಳಿಸಿದ್ದಾರೆ.
ಬಿಹಾರದಲ್ಲಿಅ. 28ರಂದು ಮೊದಲ ಹಂತ, ನ.3 ರಂದು ಎರಡನೇ ಹಂತ, ನ.7ರಂದು ಮೂರನೇ ಹಂತದ ಚುನಾವಣೆ ನಡೆಯಲಿದ್ದು, ನ. 10ರಂದು ಫಲಿತಾಂಶ ಪ್ರಕಟವಾಗಲಿದೆ.