ಬೆಂಗಳೂರು,ಅ. 04 (DaijiworldNews/HR): ಜೆಡಿಎಸ್ ನವರು ತಮ್ಮ ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ಬರುವುದಿಲ್ಲ. ಅವರು ಬೇರೆಯವರ ಕುದುರೆ ಮೇಲೆ ಏರಿ ಬಂದು ಅಧಿಕಾರಕ್ಕೆ ಬರುವವರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಇಂದು ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ದೇವೇಗೌಡರ ಕಾಲದಿಂದಲೂ ಜೆಡಿಎಸ್ನವರು ಕಣ್ಣೀರು ಹಾಕಿ ಭಾವನಾತ್ಮಕವಾಗಿ ಜನರ ಸೆಳೆಯುವ ಕೆಲಸ ಮಾಡತ್ತಿದ್ದರು, ಇದೀಗ ಕುಮಾರಸ್ವಾಮಿ ಕೂಡ ಅದನ್ನೆ ಮುಂದುವರೆಸಿದ್ದಾರೆ ಎಂದುರು.
ಇನ್ನು ಈ ಚುನಾವಣೆಯಲ್ಲಿ ಜೆಡಿಎಸ್ ನಮಗೆ ಲೆಕ್ಕಕ್ಕೆ ಇಲ್ಲ. ಬಿಜೆಪಿ ಜೊತೆ ನೇರ ಹೋರಾಟ ನಮ್ಮದು. ಕೆಲವು ಸಾರಿ ಅವರಿಬ್ಬರೂ ಒಳ ಒಪ್ಪಂದ ಮಾಡಿಕೊಳ್ಳುತ್ತಾರೆ. ಹಾಗಾಗಿ ಎಚ್ಚರ ಇರಬೇಕು. ಎಲ್ಲರೂ ಸೇರಿ ಅವರಿಬ್ಬರನ್ನು ಸೊಲಿಸಬೇಕು ಎಂದು ಕ್ಷೇತ್ರದ ನಾಯಕರಿಗೆ ಕರೆ ನೀಡಿದ್ದಾರೆ.
ಕಾಂಗ್ರೆಸ್ ಗೆ ಈ ಉಪ ಚುನಾವಣೆ ಅಗತ್ಯವಿರಲಿಲ್ಲ. ಬಹಳ ಜನರು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ. ಶಿರಾ ಬಾರ್ ಅಸೋಸಿಯೇಷನ್ ನ 90ಕ್ಕೂ ಹೆಚ್ಚು ವಕೀಲರು ಕಾಂಗ್ರೆಸ್ ಸೇರಿರುವುದು ಒಳ್ಳೆಯ ಬೆಳವಣಿಗೆ. ಶಿರಾಗೆ ಜಿಲ್ಲಾ ನ್ಯಾಯಾಲಯ ಮಾಡಬೇಕು ಎಂಬ ಬೇಡಿಕೆಗೆ ನಾವು ಮತ್ತೆ ಅಧಿಕಾರಕ್ಕೆ ಬರುವ ಲಕ್ಷಣ ಇದೆ. ಮುಂದಿನ ಚುನಾವಣೆಯಲ್ಲಿ ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.