ಪಂಜಾಬ್, ಅ. 04(DaijiworldNews/PY): ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಂದೇ ಕೃಷಿ ಮಸೂದೆಗಳನ್ನು ರದ್ದು ಮಾಡಲಿದೆ. ಕಾಂಗ್ರೆಸ್ ಎಂದಿಗೂ ಈ ಮಸೂದೆಯಿಂದ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.
ಪಕ್ಷದ ವತಿಯಿಂದ ಪಂಜಾಬ್ ನಲ್ಲಿ ನಡೆಯುತ್ತಿರುವ ಖೇತಿ ಬಚಾವೋ ಯಾತ್ರಾವನ್ನು ಉದ್ಘಾಟಿಸಿ ಬಳಿಕ ಮಾತನಾಡಿದ ಅವರು. ಈ ದೇಶದ ಮೂರು ಸ್ತಂಭಗಳಾದ ಕನಿಷ್ಠ ಬೆಲೆ, ಆಹಾರ ಸಂಗ್ರಹಣೆ ಹಾಗೂ ಮುಕ್ತ ಮಾರುಕಟ್ಟೆ ಈ ವ್ಯವಸ್ಥೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ನಾಶಗೊಳಿಸುತ್ತಿದ್ದಾರೆ. ಕಾಂಗ್ರೆಸ್ ಎಂದಿಗೂ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಗಳಿಗೆ ಬೆಂಬಲ ನೀಡುವುದಿಲ್ಲ ಎಂದರು.
ಈ ಮಸೂದೆಗಳು ರೈತ ಪರ ಅಥವಾ ರೈತರಿಗೆ ಸಂತಸವನ್ನುಂಟು ಮಾಡುತ್ತಿದ್ದರೆ, ದೇಶದಾದ್ಯಂತ ಯಾಕೆ ಈ ರೀತಿಯಾಗಿ ಹೋರಾಟ ನಡೆಸುತ್ತಿದ್ದರು? ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣವೇ ಈ ಕಾಯ್ದೆಗಳನ್ನು ಕಿತ್ತೆಸೆಯಲಿದೆ ಎಂದು ಹೇಳಿದರು.