ಭೋಪಾಲ್, ಅ. 05 (DaijiworldNews/MB) : ''ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಹತ್ಯೆ ಮಾಡುವಂತ ಬಾಂಬ್ನ್ನು ಯಾಕೆ ಯಾರೂ ತಯಾರಿಸುತ್ತಿಲ್ಲ'' ಎಂದು ಮಧ್ಯಪ್ರದೇಶದ ಜೆಜಿಪಿ ಮಾಜಿ ಶಾಸಕರೊಬ್ಬರು ವಿವಾದಾದ್ಮಕ ಹೇಳಿಕೆ ನೀಡಿದ್ದಾರೆ.
ಇತ್ತೀಚೆಗೆ ಸಿಯೋನಿ ಜಿಲ್ಲೆಯಲ್ಲಿ ನಡೆದ ಗ್ರಾಮಸ್ಥರ ಸಭೆಯಲ್ಲಿ ಮಾಜಿ ಶಾಸಕ ರಾಮ್ಗುಲಂ ಉಯ್ಕೆ ಅವರು ಮಾತನಾಡುತ್ತಾ, ''ರಾಜೀವ್ ಗಾಂಧಿಯನ್ನು ಹತ್ಯೆ ಮಾಡಲು ಗುಂಡುಗಳನ್ನು ಮಾಡಲಾಗಿತ್ತು. ರಾಜೀವ್ ಗಾಂಧಿಯನ್ನು ಹತ್ಯೆ ಮಾಡಲು ಮಾನವ ಬಾಂಬ್ ಸಿದ್ದವಾಯಿತು. ಮೋದಿಜಿ ಅವರನ್ನು ಹತ್ಯೆ ಮಾಡಲು ಯಾರೂ ಬಾಂಬ್ ತಯಾರಿಸಿಲ್ಲ. ಯಾಕೆ ಈಗ ಬಾಂಬ್ಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆಯೇ?'' ಎಂದು ಪ್ರಶ್ನಿಸಿದ್ದಾರೆ.
ಇನ್ನು ''ಕೊರೊನಾ ವಿಚಾರವಾಗಿ ಮೋದಿ ವಿರುದ್ದ ವಾಗ್ದಾಳಿ ನಡೆಸಿದ ಅವರು, ಒಬ್ಬ ವ್ಯಕ್ತಿ 130 ಕೋಟಿ ಜನರಿರುವ ದೇಶವನ್ನೇ ಮರಳು ಮಾಡುತ್ತಿದ್ದಾನೆ. ಈ ಕೇಂದ್ರ ಸರ್ಕಾರ ಕೊರೊನಾಗೆ ಲಸಿಕೆ ಅಭಿವೃದ್ದಿ ಮಾಡುವಲ್ಲಿ ವಿಫಲವಾಗಿದೆ'' ಎಂದು ಹೇಳಿದ್ದಾರೆ.
ಇನ್ನು ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸಿಯೋನಿ ಜಿಲ್ಲೆಯ ಸ್ಥಳೀಯ ಬಿಜೆಪಿ ಮುಖಂಡ ಪ್ರಮೋದ್ ಪಟೇಲ್ ಅವರು, ''ಉಯ್ಕೆ ಅವರು ಪುಕ್ಕಟೆ ಪ್ರಚಾರಕ್ಕಾಗಿ ಬುಡಕಟ್ಟು ಜನರ ಎದುರು ಆಕ್ಷೇಪಾರ್ಹ ಭಾಷಣ ಮಾಡಿ ಅವರ ದಾರಿ ತಪ್ಪಿಸುವ ಯತ್ನ ಮಾಡಿದ್ದಾರೆ. ಪ್ರಧಾನಿಯನ್ನು ಕೊಲ್ಲಲು ಬಾಂಬ್ ತಯಾರಿಸಲು ಹೇಳುವುದು ಅತೀ ಗಂಭೀರವಾದ ಅಪರಾಧ. ಮಾಜಿ ಶಾಸಕ ರಾಮ್ಗುಲಂ ಉಯ್ಕೆ ಅವರ ವಿರುದ್ದ ಕ್ರಮಕೈಗೊಳ್ಳಬೇಕು'' ಎಂದು ಆಗ್ರಹಿಸಿದ್ದಾರೆ. ಇನ್ನು ಈ ಬಗ್ಗೆ ಯಾವ ಬಿಜೆಪಿ ನಾಯಕರೂ ಇನ್ನೂ ದೂರು ನೀಡಿಲ್ಲ ಎಂದು ವರದಿ ತಿಳಿಸಿದೆ.