ಹೊಸದಿಲ್ಲಿ, ಅ.5 (DaijiworldNews/HR): ದೇಶದ 20ರಿಂದ 25 ಕೋಟಿ ಜನರಿಗೆ ಜುಲೈ 2021 ರ ಸಂದರ್ಭದಲ್ಲಿ ಲಸಿಕೆಯನ್ನು ನೀಡಲು ಅಂದಾಜು ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ.
ಕೊರೊನಾ ಸೋಂಕಿಗೆ ಲಸಿಕೆ ಲಭ್ಯವಾದರೂ ಕೂಡಾ ಭಾರತದ ಎಲ್ಲರಿಗೂ ತಲುಪುವಲ್ಲಿ ಕೊಂಚ ವಿಳಂಬವಾಗಬಹುದು. ಜನವರಿಯಲ್ಲಿ ಲಭ್ಯವಾದ ಲಸಿಕೆಯನ್ನು ನೀಡಲು ಪ್ರಾರಂಭಿಸಿದರೂ ಅದು 20-25 ಕೋಟಿ ಮಂದಿಗೆ ಲಭ್ಯವಾಗಲು ಸುಮಾರು 7 ತಿಂಗಳುಗಳ ಸಮಯಾವಕಾಶ ಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಇನ್ನು ಈ ಲಸಿಕೆಗಳನ್ನು ನೀಡುವ ಆದ್ಯತೆಗಳ ಬಗ್ಗೆ ಅಕ್ಟೋಬರ್ ಅಂತ್ಯದಲ್ಲಿ ಉನ್ನತ ಮಟ್ಟದ ತಜ್ಞರ ತಂಡವು ಸರ್ಕಾರಕ್ಕೆ ಮಂಡಿಸಲಿದೆ. ಕೊರೊನಾ ವಾರಿಯರ್ಸ್ಗಳಾದ ವೈದ್ಯರು, ದಾದಿಯರು ಮೊದಲಾದವರಿಗೆ ಸರ್ಕಾರವು ಪ್ರಥಮ ಆದ್ಯತೆ ನೀಡುವ ಸಾಧ್ಯತೆ ಅಧಿಕವಾಗಿದೆ.