ಬೆಂಗಳೂರು, ಅ. 05(DaijiworldNews/PY): ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಅವರ ಸಹೋದರ ಡಿ.ಕೆ.ಸುರೇಶ್ ಅವರ ಮನೆ ಮೇಲೆ ಸಿಬಿಐ ದಾಳಿ ನಡೆಸಿದ್ದು, ಇದೀಗ ಡಿಕೆಶಿ ಅವರ ವಿರುದ್ದ ಸಿಬಿಐ ಅಧಿಕಾರಿಗಳು ಎಫ್ಐಆರ್ ದಾಖಲಿಸಿದ್ದಾರೆ.
ಸುಮಾರು 60 ಸಿಬಿಐ ತಂಡದ ಅಧಿಕಾರಿಗಳ ತಂಡವು, ಕರ್ನಾಟಕದಲ್ಲಿ 9, ದೆಹಲಿಯಲ್ಲಿ 4, ಮುಂಬೈನಲ್ಲಿ ಒಂದು ಸೇರಿದಂತೆ ಒಟ್ಟು 14 ಕಡೆ ದಾಳಿ ಇಂದು ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಡಿ.ಕೆ.ಶಿ ಸಹೋದರ ಡಿ.ಕೆ.ಸುರೇಶ್ ಅವರ ಮನೆ ಹಾಗೂ ಕಚೇರಿಗಳ ಮೇಲೆ ಸಿಬಿಐ ದಾಳಿ ನಡೆಸಿದೆ. ದಾಳಿ ಬೆನ್ನಲ್ಲೇ, ಡಿಕೆಶಿ ಅವರ ವಿರುದ್ದ ಸಿಬಿಐನ ಬೆಂಗಳೂರು ಘಟಕದಲ್ಲಿ ಎಫ್ಐಆರ್ ದಾಖಲಾಗಿದೆ.
ದಾಳಿ ನಡೆಸಿದ ಹಿನ್ನೆಲೆ ಕೈ ನಾಯಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.