ಬೆಂಗಳೂರು, ಅ.5 (DaijiworldNews/HR): ಮುಂಬೈಯಲ್ಲಿ 22 ವರ್ಷದ ಯುವತಿಯ ಅತ್ಯಚಾರ ಮತ್ತು 5 ಲಕ್ಷ ರೂ ಹಣ ಸುಲಿಗೆ ಆರೋಪದಲ್ಲಿ ತಲೆಮರೆಸಿಕೊಂಡಿದ್ದ 23 ವರ್ಷದ ಯುವಕನನ್ನು ಮುಂಬೈ ಪೊಲೀಸರು ಡೆಲಿವರಿ ಬಾಯ್ ವೇಷ ಹಾಕಿ ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಈ ಮೊದಲು ಆಗಸ್ಟ್ನಲ್ಲಿ ಸಂತ್ರಸ್ಥೆಯು ಮುಂಬೈನಲ್ಲಿ ದೂರು ದಾಖಲಿಸಿದ್ದು, ಈ ಪ್ರಕರಣದಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಆಗಸ್ಟ್ ಅಂತ್ಯದ ವೇಳೆಗೆ, ಈ ಪ್ರಕರಣದ ತನಿಖೆ ನಡೆಸುತ್ತಿರುವ ಮುಂಬೈನ ಜೆಜೆ ಮಾರ್ಗ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು, ಯುವತಿಯೊಂದಿಗೆ ತನಿಖೆಗಾಗಿ ಬೆಂಗಳೂರಿನಲ್ಲಿ ತಂಗಿದ್ದಾರೆ ಎಂದು ತಿಳಿದುಬಂದಿದೆ.
ಈ ಆರೋಪಿ ಆನ್ ಲೈನ್ ಮೂಲಕ ಆಹಾರವನ್ನು ತರಿಸಿಕೊಳ್ಳುತ್ತಿದ್ದ ಎಂದು ಆತನ ಕರೆ ದಾಖಲೆಗಳಿಂದ ಪೊಲೀಸರು ಪತ್ತೆ ಮಾಡಿದ್ದು, ಪೊಲೀಸರು ಡೆಲಿವರಿ ಬಾಯ್ ವೇಷದ ಮೂಲಕ ಆತನ ಅಪಾರ್ಟ್ಮೆಂಟ್ಗೆ ಪ್ರವೇಶಿಸಿ ಬಂಧಿಸಿದ್ದಾರೆ.
ಅವರನ್ನು ಬೆಂಗಳೂರಿನ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು ಮತ್ತು ನಂತರ ಅವರನ್ನು ಟ್ರಾನ್ಸಿಟ್ ರಿಮಾಂಡ್ನಲ್ಲಿ ಮುಂಬೈಗೆ ಕಳುಹಿಸಲಾಯಿತು.
ಯುವತಿಯು 2017 ರಲ್ಲಿ ಮುಂಬೈನಲ್ಲಿ ಆರೋಪಿ ಮೊಹಮ್ಮದ್ ಶೌಕತ್ ನನ್ನು ಸೋಷಿಯಲ್ ಮೀಡಿಯಾ ಮೂಲಕ ಭೇಟಿಯಾಗಿದ್ದರು, ಬಳಿಕ ಈ ವ್ಯಕ್ತಿಯು ತನ್ನ ಹೋಟೆಲ್ಗೆ ಭೇಟಿ ನೀಡುವಂತೆ ಸಂತ್ರಸ್ಥೆಯನ್ನು ಮೋಸಗೊಳಿಸಿದನೆಂದು ಆರೋಪಿಸಲಾಗಿದ್ದು, ಅಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆಸಿ ಈ ಕೃತ್ಯದ ವಿಡಿಯೋ ಮಾಡಿದ್ದಾನೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಯುವತಿಯು ತನ್ನ ದೂರಿನಲ್ಲಿ, ಆರೋಪಿಯು ತಾನು ಮದುವೆಯಾಗುವುದಾಗಿ ಭರವಸೆ ನೀಡಿ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವನ್ನು ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಿದ್ದಾರೆ ಎಂದು ಆರೋಪಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.