ಬೆಂಗಳೂರು, ಅ.05(DaijiworldNews/PY): ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮನೆ ಮೇಲೆ ನಡೆದಿರುವ ದಾಳಿಗೂ ಹಾಗೂ ಉಪ ಚುನಾವಣೆಗೂ ಯಾವುದೇ ರೀತಿಯಾದ ಸಂಬಂಧ ಇಲ್ಲ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಈ ವಿಚಾರವಾಗಿ ಯಾವುದೇ ರಾಜಕೀಯ ಬಣ್ಣ ಬಳಿಯುವುದು ಬೇಡ. ಈ ಹಿಂದೆ ಡಿಕೆಶಿ ಅವರ ಮನೆ ಮನೆ ಮೇಲೆ ಆದಾಯ ತೆರಿಗೆ ಹಾಗೂ ಇಡಿ ದಾಳಿ ನಡೆಸಿತ್ತು. ಇದೀಗ ಸಿಬಿಐ ನಡೆಸಿದ ದಾಳಿ ಅದರ ಮುಂದುವರೆದ ದಾಳಿಯಾಗಿರಬಹುದು ಎಂದಿದ್ದಾರೆ.
ತನಿಖೆಗೆ ಸಹಕರಿಸುವುದಾಗಿ ಸ್ವತಃ ಡಿಕೆಶಿ ಅವರೇ ತಿಳಿಸಿದ್ದಾರೆ. ಯಾವುದಕ್ಕೂ ನಿಜ ಏನೆಂದು ತಿಳಿಯಲಿ. ಇಂತಹ ವಿಚಾರಗಳಿಗೆ ರಾಜಕೀಯದ ಬಣ್ಣ ಬಳಿಯುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.