ಲಕ್ನೋ, ಅ. 05 (DaijiworldNews/MB) : ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕಚೇರಿ ಈಗ ನೇರವಾಗಿ ಲಕ್ಷಾಂತರ ರೈತರನ್ನು ಸಂಪರ್ಕ ಮಾಡಿ ಸಮಸ್ಯೆಗಳನ್ನು ಕೇಳೀ ಪರಿಹಾರ ನೀಡಲು ಸಹಾಯವಾಣಿ ಆರಂಭಿಸಲಾಗಿದೆ. ತಮ್ಮ ಸಮಸ್ಯೆಗಳ ಬಗ್ಗೆ ತಿಳಿಸಲು ರೈತರು 1076 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬಹುದಾಗಿದೆ.
ಸರ್ಕಾರದ ವಕ್ತಾರರ ಪ್ರಕಾರ ಈ ಸಹಾಯವಾಣಿ ನೇರವಾಗಿ ರೈತರನ್ನು ಸಂಪರ್ಕಿಸುವ ಉದ್ದೇಶದಿಂದ ಪ್ರಾರಂಭಿಸಲಾಗಿದ್ದು ಕನಿಷ್ಟ ಬೆಂಬಲ ಬೆಲೆ ಸೇರಿದಂತೆ ಸರ್ಕಾರದ ಯೋಜನೆಗಳ ಬಗ್ಗೆ ರೈತರಿಗೆ ಈ ಮೂಲಕ ತಿಳಿಸಲಾಗುತ್ತದೆ.
ಈ ಬಗ್ಗೆ ಮಾಹಿತಿ ನೀಡಿರುವ ಈ ಸಹಾಯವಾಣಿಯ ಕಾರ್ಯಚಟುವಟಿಕೆಯ ಮೇಲ್ವಿಚಾರಣೆಯನ್ನು ನಡೆಸುವ ಮುಖ್ಯಮಂತ್ರಿಗಳ ಕಚೇರಿ, "ಈವರೆಗೆ ಸಿಎಂ ಕಚೇರಿಯ ಸಹಾಯವಾಣಿಯಿಂದ ಕೊರೊನಾ ರೋಗಿಗಳ ಮೇಲ್ವಿಚಾರಣೆ ನಡೆಸಲಾಗುತ್ತಿತ್ತು. ಆದರೆ ಇಂದಿನಿಂದ ಸಹಾಯವಾಣಿ ರೈತರನ್ನು ತಲುಪುತ್ತದೆ ಎಂದು ಹೇಳಿದ್ದಾರೆ.
ಹೊಸ ಕೃಷಿ ಕಾನೂನುಗಳ ಬಗ್ಗೆ ಜನರಿಗೆ ಇರುವ ತಪ್ಪು ಮಾಹಿತಿಯ ಬಗ್ಗೆ ರೈತರಿಗೆ ತಿಳಿಸಲು ಬಿಜೆಪಿ ಸರ್ಕಾರ ಈ ಅಭಿಯಾನ ಆರಂಭಿಸಿದೆ ಎಂದು ಕಚೇರಿ ತಿಳಿಸಿದೆ.