ನವದೆಹಲಿ, ಅ. 05(DaijiworldNews/PY): ಅಟಲ್ ಸುರಂಗ ಉದ್ಘಾಟನೆಯ ಬಳಿಕ ಇದೀಗ ಲಡಾಖ್ ಅನ್ನು ಸಂಪರ್ಕಿಸುವ ಶಿಂಕು-ಲಾ ಪಾಸ್ ಸಮೀಪ ಸುರಂಗದ ಕಾಮಗಾರಿಯನ್ನು ತ್ವರಿತವಾಗಿ ಸಂಪೂರ್ಣಗೊಳಿಸಲು ಗಡಿ ರಸ್ತೆಗಳ ಸಂಸ್ಥೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಸೂಚನೆ ನೀಡಿದ್ದಾರೆ.
ಲಡಾಖ್ ಗೆ ದಾರ್ಚ-ಪದಂ-ನಿಮು ಮಾರ್ಗದ ಮೂಲಕ ಸಂಪರ್ಕಿಸುವ ಶಿಂಕು-ಲಾ ಸುರಂಗ ನಿರ್ಮಾಣವಾಗಲಿದ್ದು, ಈ ಸುರಂಗದ ಕಾಮಗಾರಿಯನ್ನು ಮುಂದಿನ 3 ವರ್ಷಗಳ ಒಳಗಾಗಿ ಪೂರ್ಣಗೊಳಿಸಬೇಕೇಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಸದ್ಯ ಈ ಸುರಂಗದ ಕಾಮಗಾರಿಯು 100 ಕಿ. ಮೀ ಸಾಗಿದ್ದು, ಮೂರು ವರ್ಷಗಳಲ್ಲಿ 200 ಕಿ. ಮೀ ಪೂರ್ಣಗೊಳ್ಳಲಿದೆ.