ಬೆಂಗಳೂರು, ಅ. 05(DaijiworldNews/PY): ಡಿ. ಕೆ.ಶಿವಕುಮಾರ್ ಅವರ ಮನೆ ಮೇಲೆ ಸಿಬಿಐ ನಡೆಸಿದ ದಾಳಿ ಬಗ್ಗೆ ಉಲ್ಲೇಖಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು, ಭಂಡತನಕ್ಕೆ ಕೊನೆಯುಂಟೆ? ಮಾಡಿದ್ದುಣ್ಣೋ ಮಹಾರಾಯ ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಭಂಡತನಕ್ಕೆ ಕೊನೆಯುಂಟೆ? ಮಾಡಿದ್ದುಣ್ಣೋ ಮಹಾರಾಯ.ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂದು ಹೇಳಿದ್ದಾರೆ.
ಕೈ ನಾಯಕರ ಸತ್ಯ ಏನೆಂದರೆ, ಸೋನಿಯಾ ಗಾಂಧಿ ಸೇರಿದಂತೆ ರಾಹುಲ್ ಗಾಂಧಿ, ಪಿ. ಚಿದಂಬರಂ ಮತ್ತು ಡಿ.ಕೆ. ಶಿವಕುಮಾರ್ ಈ ಎಲ್ಲಾ ನಾಯಕರು ಜಾಮೀನಿನ ಮೂಲಕ ಹೊರಬಂದಿದ್ದಾರೆ ಎಂದು ತಿಳಿಸಿದ್ದಾರೆ.
ಭ್ರಷ್ಟಾಚಾರಕ್ಕೆ ಸಿಲುಕಿರುವ ಕೈ ನಾಯಕರು ಪ್ರಧಾನಿ ಮೋದಿ ಅವರನ್ನು ಹಾಗೂ ಸಿ. ಎಂ ಬಿ. ಎಸ್.ಯಡಿಯೂರಪ್ಪ ಅವರನ್ನು ದೂಷಿಸುತ್ತಿದ್ದಾರೆ ಎಂದಿದ್ದಾರೆ.
ಇದು ರಾಹುಲ್ ಗಾಂಧಿ ಅವರ ಸ್ವರ್ಗದಲ್ಲಿ ತೇಲಾಡುತ್ತೀರುವ ಸುರ್ಜೇವಾಲ ಅವರಿಗೆ ಎಚ್ಚರಗೊಳ್ಳಲು ಒಳ್ಳೆಯ ಸಮಯ ಎಂದು ಹೇಳಿದ್ದಾರೆ.