ಪಟ್ನಾ, ಅ. 05(DaijiworldNews/PY): ಬಿಜೆಪಿಗೆ ಸಹಾಯವಾಗುವ ನಿಟ್ಟಿನಲ್ಲಿ ಅಭ್ಯರ್ಥಿಗಳನ್ನು ವಿಧಾನಸಭೆಯ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಣಿಸಲು ಮುಂದಾಗಿದ್ದಾರೆ ಎನ್ನುವ ಆರೋಪವನ್ನು ತಳ್ಳಿ ಹಾಕಿರುವ ಹೈದರಾಬಾದ್ನ ಸಂಸದ ಅಸಾದುದ್ದೀನ್ ಒವೈಸಿ ಅವರು, ಬಿಹಾರದಲ್ಲಿ ಎನ್ಡಿಎ ಜಯ ಗಳಿಸಲು ಆರ್ಜೆಡಿ ಕಾರಣ ಎಂದು ತಿಳಿಸಿದ್ದಾರೆ.
ಕೈ ಪಕ್ಷವು ಮಹಾರಾಷ್ಟ್ರದಲ್ಲಿ ಎಐಎಂಐಎಂನೊಂದಿಗೆ ಕೈಜೋಡಿಸಿತ್ತು. ಚುನಾವಣೆಯ ನಂತರ ಶಿವಸೇನೆಯೊಂದಿಗೆ ಸೇರಿತ್ತು. ಹಾಗಾಗಿ ಕೈ ಮುಖಂಡರು ನಮಗೆ ಪಾಠ ಹೇಳುವ ಅವಶ್ಯಕತೆ ಇಲ್ಲ ಎಂದಿದ್ದಾರೆ.
ಸದ್ಯ ಒವೈಸಿ ಅವರು ಹಾಗೂ ದೇವೇಂದ್ರ ಪ್ರಸಾದ್ ಯಾದವ್ ಅವರು ಬಿಹಾರ ವಿಧಾನಸಭೆ ಚುನಾವಣೆಯ ಸಲುವಾಗಿ ಯುಡಿಎಸ್ಎ ಅನ್ನು ರಚಿಸಿದ್ದಾರೆ.