ಹತ್ರಸ್, ಅ. 06 (DaijiworldNews/HR): ಉತ್ತರಪ್ರದೇಶದ ಹತ್ರಸ್ ಜಿಲ್ಲೆಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಅಥವಾ ಸಿಟ್ ಇಂದು ಸಂತ್ರಸ್ತ ಯುವತಿಯ ಗ್ರಾಮಕ್ಕೆ ಭೇಟಿ ನೀಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯೋಗಿ ಆದಿತ್ಯನಾಥ ಸರಕಾರದಿಂದ ರಚಿಸಿರುವ ತನಿಖಾ ಸಮಿತಿಯು ಕೃತ್ಯ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದು, ನಾಳೆ ತನ್ನ ವರದಿಯನ್ನು ಸರಕಾರಕ್ಕೆ ಸಲ್ಲಿಸಲಿದೆ ಎಂದು ತಿಳಿದು ಬಂದಿದೆ.
ಇನ್ನು ಸೆ.14ರಂದು ಈ ಪ್ರಕರಣ ನಡೇದಿದ್ದು, ಉತ್ತರಪ್ರದೇಶ ಪೊಲೀಸರು ಈ ಪ್ರಕರಣವನ್ನು ನಿಭಾಯಿಸಿದ ರೀತಿಗೆ ಟೀಕೆ ವ್ಯಕ್ತವಾದ ಬಳಿಕ ರಾಜ್ಯ ಸರಕಾರವು ಮೂವರು ಸದಸ್ಯರ ಸಮಿತಿ ರಚಿಸಿದ್ದು, ತನಿಖಾ ತಂಡಕ್ಕೆ ಉತ್ತರಪ್ರದೇಶದ ಗೃಹ ಕಾರ್ಯದರ್ಶಿ ಭಗವಾನ್ ಸ್ವರೂಪ್ ನೇತೃತ್ವವಹಿಸಿದ್ದಾರೆ.