ದೆಹಲಿ,ಅ. 06 (DaijiworldNews/HR): ಕೇಂದ್ರ ಸರ್ಕಾರದ ಆದೇಶದಂತೆ ಅ. 15ರಿಂದ ಚಿತ್ರಮಂದಿರ,ಮಲ್ಟಿಪ್ಲೆಕ್ಸ್ಗಳು ಪುನಾರರಾಂಭವಾಗಲಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
ಚಿತ್ರಮಂದಿರಕ್ಕೆ ಕೇವಲ್ ಶೇ. 50ರಷ್ಟು ಜನರಿಗೆ ಮಾತ್ರ ಪ್ರವೇಶವಕಾಶವನ್ನು ಕೇಂದ್ರ ಸರ್ಕಾರ ನೀಡಿದೆ ಎಂದು ಜಾವಡೇಕರ್ ತಿಳಿಸಿದ್ದಾರೆ.
ಇನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಇಲಾಖೆ ಸೂಚಿಸಿರುವಂತೆ ಕೊರೊನಾ ಮುಂಜಾಗ್ರತ ಕ್ರಮಗಳನ್ನು ಕಡ್ದಾಯಾವಾಗಿ ಚಿತ್ರ ಮಂದಿರಗಳಲ್ಲಿ ಪಾಲಿಸಬೇಕು ಎಂದೂ ಅವರು ಎಚ್ಚರಿಕೆ ನೀಡಿದ್ದಾರೆ.
ದೇಶದಲ್ಲಿ ಮಾರ್ಚ್ 25ರಂದು ಮೊದಲ ಬಾರಿಗೆ ಲಾಕ್ಡೌನ್ ಜಾರಿ ಮಾಡಿತು. ಅಂದಿನಿಂದ ಇಲ್ಲಿಯವರೆಗೆ ಚಿತ್ರಮಂದಿಗಳು ತೆರೆದಿಲ್ಲ. ಹೀಗಾಗಿ ಸಿನಿಮಾ ಕ್ಷೇತ್ರದ ಕಲಾವಿದರು, ತಂತ್ರಜ್ಞರು, ಸಿಬ್ಬಂದಿ ಸಂಕಷ್ಟಕ್ಕೆ ಸಿಲುಕಿದ್ದು, ಅವರ ನೆರವಿಗಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿದ ಬಳಿಕ ಇದೀಗ ಈ ತಿರ್ಮಾಣ ಕೈಗೊಂಡಿ ಎಂದು ವರದಿಯಾಗಿದೆ.