ನವದೆಹಲಿ, ಅ. 06 (DaijiworldNews/MB) : ಇಡೀ ದೇಶವನ್ನೇ ಥಳಿಸುತ್ತಿರುವಾಗ ಹತ್ರಸ್ ಸಂತ್ರಸ್ತೆಯ ಕುಟುಂಬವನ್ನು ಭೇಟಿಯಾಗಲು ಹೋಗ ಸಂದರ್ಭ ಪೊಲೀಸರು, ನನ್ನನ್ನು ತಳ್ಳಿದ್ದು ದೊಡ್ಡ ವಿಷಯವೇನಲ್ಲಾ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮಂಗಳವಾರ ಹೇಳಿದ್ದಾರೆ.
ಈ ಬಗ್ಗೆ ಪಂಜಾಬ್ನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ''ಯಾರೂ ಕೂಡಾ ಊಹೆ ಕೂಡಾ ಮಾಡಲಾಗದಂತೆ ಹತ್ರಸ್ ಸಂತ್ರಸ್ತೆಯ ಕುಟುಂಬಕ್ಕೆ ಅನ್ಯಾಯ ಮಾಡಲಾಗುತ್ತಿದೆ. ಈ ಕಾರಣದಿಂದಾಗಿ ಕುಟುಂಬವನ್ನು ಭೇಟಿಯಾಗಲು ನಿರ್ಧಾರ ಮಾಡಿದ್ದೆ. ಅವರು ಏಕಾಂಗಿಯಲ್ಲ, ಅವರೊಂದಿಗೆ ನಾವೆಲ್ಲರೂ ಇದ್ದೇವೆ. ಸಾರ್ವಜನಿಕರು ಮತ್ತು ರೈತರ ರಕ್ಷಣೆ ನಮ್ಮ ಕೆಲಸ. ನಾವು ಸರ್ಕಾರದ ವಿರುದ್ದ ನಿಂತರೆ ನಮ್ಮನ್ನು ಕೂಡಾ ತಳ್ಳಲಾಗುತ್ತದೆ, ಲಾಠಿಯಿಂದ ಹೊಡೆಯಲಾಗುತ್ತದೆ'' ಎಂದು ಹೇಳಿದ್ದಾರೆ.
ಇನ್ನು ಈ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ದ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿಯವರು, ''ಪ್ರಧಾನಿ ಮೋದಿಯವರು ಯಾಕೆ ಈ ವಿಚಾರದಲ್ಲಿ ಒಂದೇ ಒಂದು ಹೇಳಿಕೆಯಾಗಲಿ, ಟ್ವೀಟ್ ಆಗಲಿ ಮಾಡಿಲ್ಲ'' ಎಂದು ಪ್ರಶ್ನಿಸಿದ್ದಾರೆ.
ಹಾಗೆಯೇ ಇದೇ ಸಂದರ್ಭದಲ್ಲಿ ಭಾರತ ಚೀನಾ ಗಡಿ ವಿವಾದಕ್ಕೆ ಸಂಬಂಧಿಸಿ ಮಾತನಾಡಿ, ''ಪ್ರಧಾನಿ ಮೋದಿಯವರಿಗೆ ತಮ್ಮ ಇಮೇಜ್ ಉಳಿಸುವ ಬಗ್ಗೆ ಮಾತ್ರ ಗೀಳು ಇದೆ, ಅವರು ದೇಶದ ಆಂತರಿಕ ವ್ಯವಹಾರಗಳ ಬಗ್ಗೆ ಕಾಳಜಿ ವಹಿಸುತ್ತಿಲ್ಲ'' ಎಂದು ಆರೋಪಿಸಿದರು.
"ಮೋದಿ ಜಿ ಅವರು ಭಾರತದ ಭೂಮಿಯನ್ನು ಯಾರೂ ಕಸಿದುಕೊಂಡಿಲ್ಲ ಎಂದು ಹೇಳಿದರು. ಆದರೆ ಚೀನಾ ನಮ್ಮ ಭೂಮಿಯ 1,200 ಚದರ ಕಿ.ಮೀ ಪ್ರವೇಶವನ್ನು ತಮ್ಮ ವಶದಲ್ಲಿರಿಸಿದೆ. ಅವರು ಅದನ್ನು ಹೇಗೆ ತೆಗೆದುಕೊಂಡರು? ಎಂದು ಪ್ರಶ್ನಿಸಿದ್ದು ಚೀನಾಕ್ಕೂ ತಿಳಿದಿದೆ ಟಾಪ್ನಲ್ಲಿರುವ ವ್ಯಕ್ತಿ ತನ್ನ ಘನತೆಯನ್ನು ಉಳಿಸಲು ನಮಗೆ ಈ ಭೂಮಿಯನ್ನು ನೀಡಬಹುದು ಎಂದು ಮೋದಿಯನ್ನು ಟೀಕಿಸಿದ್ದಾರೆ.
"ಪ್ರಧಾನಿ ಮೋದಿ ತಮ್ಮ ಇಮೇಜ್ ಉಳಿಸಲು ಚೀನಾಕ್ಕೆ 1200 ಚದರ ಕಿ.ಮೀ ನೀಡಿದರು. ಪ್ರತಿಯೊಬ್ಬ ಉನ್ನತ ಮಿಲಿಟರಿ ನಾಯಕರಿಗೂ ಇದು ತಿಳಿದಿದೆ. ನೀವು ಅದನ್ನು ನಂಬಬೇಕೆ ಅಥವಾ ಬೇಡವೇ'' ಎಂದು ವ್ಯಂಗ್ಯ ಮಾಡಿದರು.
ಇನ್ನು "ನೀವು ಪಿಎಂ ಮೋದಿಯವರನ್ನು ಈ ರೀತಿಯ ಪತ್ರಿಕಾಗೋಷ್ಠಿಗೆ ಯಾಕೆ ಕರೆಯಬಾರದು. ಅವರೊಂದಿಗೆ ಮಾತನಾಡಿ. ಆದರೆ ಅವರು ಮಾಧ್ಯಮಕ್ಕೆ ಯಾಕೆ ಭಯಪಡುತ್ತಾರೆ? ಅವರು ಕೇವಲ ಒಂದು ಕಾರಣಕ್ಕಾಗಿ ಚೀನಾ ಹಾಗೂ ಮಾಧ್ಯಮಕ್ಕೆ ಭಯಪಡುತ್ತಾರೆ. ಯಾಕೆಂದರೆ ಚೀನಾ ಹಾಗೂ ಮಾಧ್ಯಮ ಎರಡೂ ಕೂಡಾ ತಮ್ಮ ಇಮೇಜ್ನ್ನು ಹಾಳು ಮಾಡಬಹುದು ಎಂಬ ಭಯ ಅವರಿಗಿದೆ'' ಎಂದು ಲೇವಡಿ ಮಾಡಿದರು.