ಬೆಳಗಾವಿ, ಅ. 06 (DaijiworldNews/HR): ಡಿ.ಕೆ ಶಿವಕುಮಾರ್ ತಾವು ಶಾಸಕರಾಗುವ ಮೊದಲು ಎಷ್ಟು ಆಸ್ತಿ ಇತ್ತು, ಇದೀಗ ಎಷ್ಟಿದೆ ಎಂಬುದನ್ನು ತಿಳಿಸಬೇಕು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸತ್ಯ ಹರಿಶ್ಚಂದ್ರ ಹಾಗೂ ಪ್ರಾಮಾಣಿಕ ಎಂದು ಹೇಳಿದರೆ ಸಾಲುವುದಿಲ್ಲ. ಎಲ್ಲವೂ ತನಿಖೆಯಲ್ಲಿ ಬಹಿರಂಗವಾಗಲಿ. ಈಗ ನಡೆದಿರುವ ಸಿಬಿಐ ದಾಳಿ ರಾಜಕೀಯ ಪ್ರೇರಿತ ಅಲ್ಲ ಎಂದು ಹೇಳಿದ್ದಾರೆ.
ಇನ್ನು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಜೋಶಿ, ಕಾಂಗ್ರೆಸ್ ಮೊದಲಿನಿಂದಲೂ ದಲ್ಲಾಳಿಗಳ ಪಕ್ಷವಾಗಿದ್ದು, ಇದೀಗ ಕೃಷಿ ಮಸೂದೆ ವಿಚಾರದಲ್ಲಿ ರೈತರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ ಎಂದರು.