ಬೆಂಗಳೂರು,ಅ.07 (DaijiworldNews/HR): ಡಿ.ಕೆ.ಶಿವಕುಮಾರ್ ಅವರ ಮನೆ ಮತ್ತು ಕಚೇರಿ ಮೇಲೆ ಸಿಬಿಐ ದಾಳಿ ಮಾಡಿಸಿ, ನಮಗೆ ಉಪಚುನಾವಣೆ ಗೆಲ್ಲುವ ಅಗತ್ಯವಿಲ್ಲ ಎಂಬುದಾಗಿ ಕಂದಾಯ ಸಚಿವ ಆರ್.ಅಶೋಕ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಬಿಜೆಪಿಗೂ ಈ ದಾಳಿಗೂ ಯಾವುದೇ ರೀತಿಯ ಸಂಬಮ್ಧ ಇಲ್ಲ. ಈ ಹಿಂದೆಯೂ ಡಿ ಕೆ ಶಿವಕುಮಾರ್ ಅವರ ಮನೆಯ ಮೇಲೆ ದಾಳಿ ನಡೆದಿದ್ದು, ಅವರ ಮುಂದುವರಿದ ಭಾಗವಾಗಿ ಶೋಧ ನಡೆದಿದೆ ಎಂಬುದಾಗಿ ಸ್ಪಷ್ಟಪಡಿಸಿದ್ದಾರೆ.
ಇನ್ನು ಈ ಹಿಂದೆ ಜನಾರ್ದನ ರೆಡ್ಡಿ ಅವರ ಮನೆಗೆ ಯುಪಿಎ ಸರ್ಕಾರ ಇದ್ದಾಗ ಆದಾಯ ತೆರಿಗೆ ಇಲಾಖೆ ಮತ್ತು ಇತರ ತನಿಖಾ ಸಂಸ್ಥೆಗಳು ದಾಳಿ ನಡೆಸಿವೆ, ಅದನ್ನು ಕಾಂಗ್ರೆಸ್ ಪಕ್ಷವೇ ಮಾಡಿಸಿದ್ದು ಎಂದು ಹೇಳಲು ಆಗುತ್ತದೆಯೇ ಎಂಬುದಾಗಿ ಪ್ರಶ್ನಿಸಿದ್ದಾರೆ.
ಇನ್ನು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಉಪಚುನಾವಣೆಯಲ್ಲಿ ಆರ್ಎಸ್ಎಸ್ನವರು 50 ಕೋಟಿ ಖರ್ಚು ಮಾಡಲು ಸಿದ್ಧತೆ ನಡೆಸಿದ್ದಾರೆ ಎಂದು ದೂರಿದ್ದಾರೆ. ಆದರೆ ಆರ್ಎಸ್ಎಸ್ ಒಂದು ಸೇವಾ ಸಂಘಟನೆಯೇ ಹೊರತು ರಾಜಕೀಯ ಸಂಘಟನೆಯಲ್ಲ ಎಂದು ಹೇಳಿದ್ದಾರೆ.