ಜಮ್ಮುಕಾಶ್ಮೀರ, ಅ.07 (DaijiworldNews/HR): ಭದ್ರತಾಪಡೆಗಳು ಮತ್ತು ಉಗ್ರರ ನಡುವೆ ಗುಂಡಿನ ಕಾಳಗ ನಡೆದಿದ್ದು ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಿದ ಘಟನೆ ಶೋಪಿಯಾನ್ ಜಿಲ್ಲೆಯ ಸುಗಾನ್ ಗ್ರಾಮದಲ್ಲಿ ನಡೆದಿದೆ.
ಘಟನೆಯಲ್ಲಿ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದ್ದು, ಅವರ ಗುರುತು ಪತ್ತೆಯಾಗಿಲ್ಲ. ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರೆದಿದ್ದು, ಇನ್ನೂ ಹೆಚ್ಚಿನ ಉಗ್ರರು ಅಡಗಿರುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಇನ್ನು ಎನ್ ಕೌಂಟರ್ ಸ್ಥಳದಿಂದ ಭಾರೀ ಪ್ರಮಾಣ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದಕ್ಕೂ ಮೊದಲು ಉಗ್ರರಿಗೆ ಶರಣಾಗುವಂತೆ ಭದ್ರತಾಪಡೆಗಳು ತಿಳಿಸಿದ್ದವು. ಆದರೇ ಏಕಾಏಕಿ ಗುಂಡು ಹಾರಿಸಿದ ಪರಿಣಾಮ ಭದ್ರತಾಪಡೆಗಳು ಕೂಡ ತಕ್ಕ ಪ್ರತ್ಯುತ್ತರ ನೀಡಿ ಇಬ್ಬರನ್ನೂ ಎನ್ ಕೌಂಟರ್ ಮಾಡಿವೆ.