ಬೆಂಗಳೂರು, ಅ. 07 (DaijiworldNews/MB) : 7 ಲಕ್ಷ ಲಂಚ ಪಡೆಯುತ್ತಿದ್ದ ಸಂದರ್ಭದಲ್ಲೇ ಬೆಂಗಳೂರಿನ ಕೆಜಿ ರೋಡ್ನಲ್ಲಿರುವ ತಹಶೀಲ್ದಾರ್ ಕಚೇರಿಯ ವಿಶೇಷ ಮಹಿಳಾ ತಹಶೀಲ್ದಾರ್ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದಿದ್ದಾರೆ ಎಂದು ವರದಿ ತಿಳಿಸಿದೆ.
ಇನ್ನೇನು 20 ದಿನಗಳಲ್ಲಿ ನಿವೃತ್ತಿಯಾಗಲಿದ್ದ ಮಹಿಳಾ ತಹಶೀಲ್ದಾರ್ ಲಕ್ಷ್ಮೀ ಹಾಗೂ ಕಚೇರಿಯ ಸಿಬ್ಬಂದಿ ಪ್ರಸನ್ನಕುಮಾರ್ ಜಮೀನು ಆರ್. ಟಿ. ಸಿ ಮಾಡಿಕೊಡಬೇಕಾದರೆ 7 ಲಕ್ಷ ಹಣ ನೀಡುವಂತೆ ಅಜಂ ಪಾಷಾ ಎಂಬವರ ಲಂಚದ ಬೇಡಿಕೆ ಮಾಡಿದ್ದರು. ಈ ಹಣವನ್ನು ಪಡೆಯುವ ಸಂದರ್ಭದಲ್ಲೇ ಎಸಿಬಿ ದಾಳಿ ನಡೆದಿದ್ದು ರೆಡ್ ಹ್ಯಾಂಡ್ ಆಗಿ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾರೆ ಎಂದು ವರದಿಯಾಗಿದೆ.
ಇನ್ನು ಈ 7 ಲಕ್ಷ ಹಣದಲ್ಲಿ ತಹಶೀಲ್ದಾರ್ ಲಕ್ಷ್ಮೀಗೆ 5 ಲಕ್ಷ ಹಾಗೂ ಪ್ರಸನ್ನಕುಮಾರ್ಗೆ 2 ಲಕ್ಷ ಎಂದು ಹಂಚಿಕೊಂಡಿದ್ದರು ಎನ್ನಲಾಗಿದೆ.