ಹರಿಯಾಣ, ಅ.07 (DaijiworldNews/HR): ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುತ್ತಿದ್ದರೆ 15 ನಿಮಿಷದೊಳಗೆ ಚೀನಾ ಸೈನ್ಯವನ್ನು ಲಡಾಕ್ನಿಂದ ಹೊರಹಾಕಕುತ್ತಿದ್ದೇವು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಕುರಿತು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳನ್ನು ವಿರೋಧಿಸಿ ಹರಿಯಾಣದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಚೀನಾ ಸೈನ್ಯವು ಈ ಹಿಂದೆ ಭಾರತದ ಭೂಪ್ರದೇಶದೊಳಗೆ ಬರುವ ಧೈರ್ಯ ಮಾಡಿರಲಿಲ್ಲ, ಆದರೆ ಇದೀಗ ಭಾರತದ 1200 ಚದರ ಕಿ.ಮೀ ಭೂಮಿಯನ್ನು ಆಕ್ರಮಿಸಿಕೊಂಡಿದೆ. ಈ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿ ನಿರಾಕರಿಸಿದ್ದಾರೆ ಎಂಬುದಾಗಿ ಆರೋಪಿಸಿದ್ದಾರೆ.
ಇನ್ನು ತನ್ನ ಭೂಪ್ರದೇಶವನ್ನು ಆಕ್ರಮಿಸಿಕೊಳ್ಳಲು ಬೇರೆ ದೇಶವೊಂದಕ್ಕೆ ಅನುವು ಮಾಡಿಕೊಟ್ಟಿರುವ ಒಂದೇ ದೇಶ ಅಂದರೆ ಅದು ಭಾರತವಾಗಿದೆ. ಚೀನಾ ಪಡೆಗಳು ನಮ್ಮ ಭೂಪ್ರದೇಶದೊಳಗೆ ಇವೆ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ನರೇಂದ್ರ ಮೋದಿ ತಮ್ಮನ್ನು ತಾವು ದೇಶಭಕ್ತ ಎಂದು ಕರೆದುಕೊಳ್ಳುತ್ತಾರೆ. ಆದರೆ ಅವರದ್ದು ಯಾವ ರೀತಿಯ ದೇಶಭಕ್ತಿ? ಎಂದು ಪ್ರಶ್ನಿಸಿದ್ದಾರೆ.