ನವದೆಹಲಿ, ಅ. 08 (DaijiworldNews/MB) : ಯಾವುದೇ ಸಂದರ್ಭದಲ್ಲೂ ದೇಶದ ಸಾರ್ವಭೌಮತ್ವ, ಹಿತಾಸಕ್ತಿ ರಕ್ಷಣೆಗೆ ಭಾರತೀಯ ವಾಯುಪಡೆ ಬದ್ಧವಾಗಿದೆ ಎಂದು ವಾಯುಪಡೆ ಮುಖ್ಯಸ್ಥ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಅವರು ಗುರುವಾರ ಹೇಳಿದ್ದಾರೆ.
ಭಾರತೀಯ ವಾಯುಪಡೆ ದಿನವನ್ನು ಪ್ರಥಮ ಬಾರಿಗೆ 1932, ಅಕ್ಟೋಬರ್ 8 ರಂದು ಆಚರಿಸಲಾಯಿತು. ಅಲ್ಲಿಂದ ಪ್ರತಿವರ್ಷ ಈ ದಿನವನ್ನು ಆಚರಿಸಲಾಗುತ್ತಿದ್ದು, ಈ ವರ್ಷ ಭಾರತವು 88ನೇ ವರ್ಷದ ವಾಯುಪಡೆ ದಿನವನ್ನು ಆಚರಿಸುತ್ತಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಭಾರತೀಯ ವಾಯುಪಡೆ 89ನೇ ವರ್ಷಕ್ಕೆ ಕಾಲಿಡುತ್ತಿದೆ. ಹಲವು ಬದಲಾವಣೆಗಳು ನಾವು ಕಾಣಬಹುದಾಗಿದೆ. ನಾವು ಏರೋಸ್ಪೇಸ್ ಶಕ್ತಿಯನ್ನು ಬಳಸಿಕೊಳ್ಳುತ್ತೇವೆ. ಸಮಗ್ರ ಮಲ್ಡಿ ಡೊಮೇನ್ ಕಾರ್ಯಾಚರಣೆಗಳನ್ನು ನಡೆಸುತ್ತೇವೆ. ಈ ವರ್ಷ ಬಹಳ ಮುಖ್ಯವಾದ ವರುಷವಾಗಿದೆ. ಪ್ರಸ್ತುತ ಭಾರತವು ಕೊರೊನಾವನ್ನು ಎದುರಿಸುತ್ತಿದೆ. ಈ ಸಂದರ್ಭದಲ್ಲೂ ನಮ್ಮ ಯೋಧರು ಪೂರ್ಣಪ್ರಮಾಣದ ಕಾರ್ಯಾಚರಣೆಗಳನ್ನು ನಡೆಸುವ ಸಾಮರ್ಥ್ಯ ಹೊಂದಿದ್ದಾರೆ. ಯಾವುದೇ ಸಂದರ್ಭದಲ್ಲೂ ದೇಶದ ಸಾರ್ವಭೌಮತ್ವ, ಹಿತಾಸಕ್ತಿ ರಕ್ಷಣೆಗೆ ಭಾರತೀಯ ವಾಯುಪಡೆ ಬದ್ಧವಾಗಿದೆ ಎಂದು ಹೇಳಿದ್ದಾರೆ.