ಬೆಂಗಳೂರು, ಅ.09 (DaijiworldNews/HR): ಪೋಷಕರ ಒತ್ತಡಕ್ಕೆ ಮಣಿದು ಮುಖ್ಯಮಂತ್ರಿ ಬಿ ಎಸ್ ಯಡಿಯುರಪ್ಪ ರಾಜ್ಯದಲ್ಲಿ ಶಾಲೆಗಳನ್ನು ತೆರೆಯುವ ಆತುರದಲ್ಲಿಲ್ಲ ಎಂದು ಹೇಳಿದ್ದಾರೆ.
ಕೊರೊನಾ ಸಿದ್ಧತೆಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯುರಪ್ಪ, "ಶಾಲೆಗಳನ್ನು ತೆರೆಯುವ ವಿಷಯವು ನಮ್ಮ ಚರ್ಚೆಗಳಲ್ಲಿ ಎಲ್ಲೂ ಕಾಣಿಸಿಕೊಂಡಿಲ್ಲ" ಸಾಂಕ್ರಾಮಿಕದ ಮಧ್ಯೆ ನಾವು ಖಂಡಿತವಾಗಿಯೂ ಶಾಲೆಯನ್ನು ತೆರೆಯುವ ಆತುರದಲ್ಲಿಲ್ಲ" ಎಂದರು.
ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಅವರು ಪ್ರಸ್ತುತ ಪರಿಸ್ಥಿತಿಯಲ್ಲಿ ಶಾಲೆಗಳನ್ನು ತೆರೆಯಲು ಆಗುವುದೆಲ್ಲ, ನಾವು ಈ ಹಿಂದೆಯೂ ಈ ಕುರಿತು ಚರ್ಚಿಸಿದ್ದು, ಶಾಲೆಗಳನ್ನು ತೆರೆ
ಆತುರ ಇಲ್ಲ ಎಂದರು.
ಇದಕ್ಕೂ ಮುನ್ನ ಗುರುವಾರ, ಪಕ್ಷದ ವ್ಯಾಪ್ತಿಯನ್ನು ಮೀರಿ ಚುನಾಯಿತ ಪ್ರತಿನಿಧಿಗಳು ಯಡಿಯೂರಪ್ಪ ಅವರಿಗೆ ಸಾಂಕ್ರಾಮಿಕ ರೋಗದ ಮಧ್ಯೆ ಶಾಲೆ ಅಥವಾ ಕಾಲೇಜುಗಳನ್ನು ತೆರೆಯದಂತೆ ಮನವಿ ಮಾಡಿದ್ದರು.
ಸುದ್ದಿಗಾರರೊಂದಿಗೆ ಮಾತನಾಡಿದ ಹಾಸನ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಂ ಗೌಡ ಅವರು ಜವಾಬ್ದಾರಿಯುತ ತಂದೆಯಾಗಿ ರಾಜ್ಯ ಸರ್ಕಾರ ತೆರೆಯಲು ನಿರ್ಧರಿಸಿದರೂ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಸಾಧ್ಯವಿಲ್ಲ ಎಂದು ಹೇಳಿದರು. "ಇಂತಹ ಅವಸರದ ನಿರ್ಧಾರ ತೆಗೆದುಕೊಳ್ಳದಂತೆ ನಾನು ಮುಖ್ಯಮಂತ್ರಿಗೆ ಮನಃಪೂರ್ವಕವಾಗಿ ಮನವಿ ಮಾಡುತ್ತೇನೆ" ಎಂದು ಅವರು ಹೇಳಿದರು.
ಜೆಡಿ-ಎಸ್ ನಾಯಕ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೂಡ ರಾಜ್ಯ ಸರ್ಕಾರ ಶಾಲೆಗಳನ್ನು ತೆರೆಯಬಾರದು ಎಂದು ಹೇಳಿದ್ದರು.