ನವದೆಹಲಿ,ಅ.09 (DaijiworldNews/HR): ಏಳು ಮಂದಿ ಭಾರತೀಯರನ್ನು ಲಿಬಿಯಾದಲ್ಲಿ ಅಪಹರಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದ್ದು, ಈ ಕುರಿತಂತೆ ಲಿಬಿಯಾದ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ತಿಳಿಸಿದೆ.
ಕಳೆದ ತಿಂಗಳು ಆಂಧ್ರಪ್ರದೇಶ, ಬಿಹಾರ, ಗುಜರಾತ್ ಮತ್ತು ಉತ್ತರ ಪ್ರದೇಶದಕ್ಕೆ ಸೇರಿದ ಏಳು ಮಂದಿ ಅಪಹರಣಕ್ಕೀಡಾಗಿದ್ದಾರೆ. ಸದ್ಯ ಲಿಬಿಯಾ ಅಧಿಕಾರಿಗಳ ಜೊತೆ ಭಾರತ ಸರ್ಕಾರ ನಿರಂತರ ಸಂಪರ್ಕದಲ್ಲಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಗಟ್ರಿಪೊಲಿ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಸೆಪ್ಟೆಂಬರ್ 14 ರಂದು ಅಶ್ವೆರಿಫ್ ಎಂಬ ಸ್ಥಳದಲ್ಲಿ ಭಾರತೀಯರನ್ನು ಅಪಹರಿಸಲಾಗಿದೆ. ಭಾರತೀಯ ಪ್ರಜೆಗಳು ನಿರ್ಮಾಣ ಮತ್ತು ತೈಲ ಸರಬರಾಜು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಸರ್ಕಾರವು ಅಪಹರಣಕ್ಕೀಡಾದವರ ಕುಟುಂಬ ಸದಸ್ಯರೊಂದಿಗೆ ಸಂಪರ್ಕದಲ್ಲಿದೆ ಎಂಬುದಾಗಿ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ತಿಳಿಸಿದ್ದಾರೆ.