ಬೆಂಗಳೂರು, ಅ. 09(DaijiworldNews/PY): ಕೊರೊನಾ ಆಸ್ಪತ್ರೆಗಳಲ್ಲಿ ದಾಖಲಾದ 72 ಗಂಟೆಗಳ ಸಮಯದಲ್ಲಿ ಸಾವನ್ನಪ್ಪಿದವರ ಮರಣಕ್ಕೆ ಕಾರಣ ತಿಳಿದುಕೊಳ್ಳುವ ಸಲುವಾಗಿ ಡೆತ್ ಆಡಿಟ್ ಮಾಡಬೇಕು ಎಂದು ಸಿಎಂ ಬಿ. ಎಸ್. ವೈ ಹೇಳಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ವಿಡಿಯೋ ಸಂವಾದದಲ್ಲಿ ಮಾತನಾಡಿದ ಅವರು, ಕೊರೊನಾ ಆಸ್ಪತ್ರೆಗಳಲ್ಲಿ ದಾಖಲಾದ 72 ಗಂಟೆಗಳಲ್ಲಿ ಸಾವನ್ನಪ್ಪಿದವರ ಮರಣಕ್ಕೆ ಕಾರಣ ತಿಳಿದುಕೊಳ್ಳುವ ಸಲುವಾಗಿ ಡೆತ್ ಆಡಿಟ್ ಮಾಡಬೇಕು. ಕೊರೊನಾದಿಂದಾಗಿ ರಾಜ್ಯದಲ್ಲಿ 72 ಗಂಟೆಗಳಲ್ಲಿ ಶೇ. 50ರಷ್ಟು ಸಾವಾಗಿದೆ ಎಂದು ತಿಳಿಸಿದ್ದಾರೆ.
ಇದರಲ್ಲಿ ಲೋಪಗಳು ಕಂಡು ಬಂದಲ್ಲಿ, ಅವುಗಳನ್ನು ಸರಿಪಡಿಸಿ ಎಲ್ಲರ ಸಹಕಾರದೊಂದಿಗೆ ರೋಗದ ಪ್ರಮಾಣ ಹಾಗೂ ಮರಣ ಪ್ರಮಾಣವನ್ನು ನಿಯಂತ್ರಿಸಬೇಕು ಎಂದು ತಿಳಿಸಿದ್ದಾರೆ.