ಮುಂಬೈ, ಅ. 09(DaijiworldNews/PY): ಕೊರೊನಾದಿಂದ ಕುಂಠಿತಗೊಂಡಿರುವ ಆರ್ಥಿಕ ಚಟುವಟಿಕೆಗಳಿಗೆ ಪುನಶ್ಚೇತನ ನೀಡುವ ಸಲುವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಪ್ರಮುಖ ಬಡ್ಡಿ ದರಗಳನ್ನು ಬದಲಾವಣೆಗೊಳಿಸದಿರಲು ತೀರ್ಮಾನಿಸಿದೆ.
ಈ ತೀರ್ಮಾನವನ್ನು ಶುಕ್ರವಾರ ನಡೆದ ಆರ್ಬಿಐ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಕೈಗೊಳ್ಳಲಾಗಿದೆ. ಡಿಸೆಂಬರ್ ನಿಂದ ದಿನದ 24ಗಂಟೆಯೂ ಆರ್ಟಿಜಿಎಸ್ ವ್ಯವಸ್ಥೆ ದೊರಕುವಂತೆ ಕ್ರಮ ಕೈಗೊಳ್ಳಲಾಗಿದೆ.
ಸಭೆಯ ಬಳಿಕ ಮಾತನಾಡಿದ ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರು, ಆರ್ಥಿಕ ಚಟುವಟಿಕೆಗಳು ಸಹಜ ಸ್ಥಿತಿಯತ್ತ ಮರಳುತ್ತಿವೆ. ಅಲ್ಲದೇ, ಈ ಬಾರಿ ದಾಖಲೆಯ ಪ್ರಮಾಣದಲ್ಲಿ ಆಹಾರ ಉತ್ಪಾದನೆಗೊಳ್ಳುವ ನಿರೀಕ್ಷೆಯೂ ಇದೆ ಎಂದಿದ್ದಾರೆ.