ತಿರುವನಂತಪುರ, ಅ.09(DaijiworldNews/PY): ಕೇರಳದ ಪದ್ಮನಾಭ ಸ್ವಾಮಿ ದೇವಾಲಯದ 10 ಮಂದಿ ಕೊರೊನಾ ಸೋಂಕು ತಗುಲಿದ್ದು, ಅ. 15ರ ತನಕ ಭಕ್ತರಿಗೆ ದೇವಾಲಯದ ಪ್ರವೇಶಕ್ಕೆ ಅನುಮತಿ ಇಲ್ಲ ಎಂದು ವರದಿಯಾಗಿದೆ.
ಈ ಬಗ್ಗೆ ಪದ್ಮನಾಭ ಸ್ವಾಮಿ ದೇವಾಲಯದ ಕಾರ್ಯಕಾರಿ ಅಧಿಕಾರಿ ರಥೀಶನ್ ಐಎಎಸ್ ಮಾಹಿತಿ ನೀಡಿದ್ದು, ತಂತ್ರಿಗಳು ಪ್ರತಿನಿತ್ಯದ ಪೂಜೆಯನ್ನು ನೆರವೇರಿಸಲಿದ್ದಾರೆ ಎಂದಿದ್ದಾರೆ.
ದೇವಾಲಯದ ಇಬ್ಬರು ಮುಖ್ಯ ಅರ್ಚಕರು ಸೇರಿದಂತೆ 8 ಸಹಾಯಕ ಅರ್ಚಕರಿಗೆ ಹಾಗೂ ಇಬ್ಬರು ಕಾವಲುಗಾರರಿಗೆ ಕೊರೊನಾ ತಗುಲಿದ ನಂತರ, ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.