ನವದೆಹಲಿ, ಅ. 09(DaijiworldNews/PY): ಕೇಂದ್ರ ಸರ್ಕಾರವು ಮನರಂಜನಾ ಪಾರ್ಕ್ ಗಳನ್ನು ತೆರೆಯಲು ಅನುಮತಿ ಕಲ್ಪಿಸಿದ್ದು, ಅವಶ್ಯಕವಾದ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದೆ.
ಸಾಂದರ್ಭಿಕ ಚಿತ್ರ
ಮನರಂಜನಾ ಪಾರ್ಕ್ ಗಳಲ್ಲಿ ಕೊರೊನಾ ಬೇಗನೆ ಹರಡುತ್ತದೆ. ಈ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಸಚಿವಾಲಯ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ನೈಸರ್ಗಿಕ ವಾತಾವರಣವನ್ನು ಬಳಸಿಕೊಳ್ಳಬೇಕು.ಆದರೆ, ಸಣ್ಣದಾದ ಸುತ್ತುವರೆದ ಸ್ಥಳಗಳನ್ನು ಬಳಸಬಾರದು. ಸಾಧ್ಯವಾದಷ್ಟು ಮಟ್ಟಿಗೆ ಹೊರಗಿನಿಂದ ಬರುವ ಗಾಳಿಯನ್ನು ಬಳಸಿಕೊಳ್ಳಿ. ಕಿಟಕಿ ಹಾಗೂ ಬಾಗಿಲುಗಳನ್ನು ತೆರೆಯಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಿದೆ.
ಉದ್ಯಾನವನಗಳಿಗಾಗಿ ಹೊರಡಿಸಲಾದ ನಿರ್ದಿಷ್ಟ ಮಾರ್ಗಸೂಚಿಯಲ್ಲಿ, ಪ್ರವೇಶದ ಸಂದರ್ಭ ಸರತಿ ಸಾಲಿನಲ್ಲಿದ್ದಾಗ ಕನಿಷ್ಟ 6 ಅಡಿ ಅಂತರ ಕಾಯ್ದುಕೊಳ್ಳಬೇಕು ಎಂದು ಹೇಳಿದೆ.
ಚಿತ್ರಮಂದಿರಗಳಿಗೂ ಮಾರ್ಗಸೂಚಿಗಳನ್ನು ಪ್ರಕಟಿಸಿದ ಕೇಂದ್ರ, ಚಿತ್ರಮಂದಿರಗಳಲ್ಲಿ ಕೇವಲ ಶೇ. 50ರಷ್ಟು ಮಂದಿಗೆ ಮಾತ್ರ ಸಿನೆಮಾ ವೀಕ್ಷಣೆಗೆ ಅವಕಾಶ. ಇಲ್ಲಿಯೂ ಕೂಡ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಈ ಪ್ರತಿ ಪ್ರದರ್ಶನದ ಬಳಿಕ ಚಿತ್ರಮಂದಿರವನ್ನು ಸ್ಯಾನಿಟೈಸ್ ಮಾಡಬೇಕು. ಪ್ರತಿಯೋರ್ವರು ಆರೋಗ್ಯ ಸೇತು ಆಪ್ ಹೊಂದಿರಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಿದೆ.
ಫುಡ್ ಕೋರ್ಟ್ ಹಾಗೂ ಇತರೆ ಸ್ಥಳಗಳಲ್ಲಿ ಜನಸಂದಣಿ ಪತ್ತೆಹಚ್ಚಲು ಸಿಸಿಟಿವಿಯನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ಸೂಚನೆ ನೀಡಿದೆ.