ನವದೆಹಲಿ, ಅ. 09(DaijiworldNews/PY): ವಿದ್ಯುತ್ನೊಂದಿಗೆ ಪವನ ಯಂತ್ರಗಳಿಂದ ಶುದ್ದ ಕುಡಿಯುವ ನೀರು ಸೇರಿದಂತೆ ಆಮ್ಲಜನಕವನ್ನು ತಯಾರು ಮಾಡು ಬಗ್ಗೆ ಚಿತ್ತ ವಹಿಸಬಹುದು ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿರುದ್ದ ಬಿಜೆಪಿ ನಾಯಕರು ಕೆಂಡಾಕಾರಿದ್ದಾರೆ.
ರಾಹುಲ್ ಗಾಂಧಿ ಹೇಳಿಕೆಯ ಬಗ್ಗೆ ಕೆಂಡಾಕಾರಿರುವ ಬಿಜೆಪಿ ನಾಯಕರು, ರಾಹುಲ್ ಗಾಂಧಿ ಅವರು ಈ ರೀತಿಯಾದ ಹೇಳಿಕೆಯನ್ನು ನೀಡುವ ಮುನ್ನ ಅವರು ಸ್ವಲ್ಪ ವೈಜ್ಞಾನಿಕ ಪತ್ರಿಕೆಗಳನ್ನು ಓದಬೇಕು. ಇದರ ಅಗತ್ಯ ಅವರಿಗಿದೆ ಎಂದು ಹೇಳಿದ್ದಾರೆ.
ಬಿಜೆಪಿ ನಾಯಕರ ಹೇಳಿಗೆ ಬಗ್ಗೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ರಾಹುಲ್ ಗಾಂಧಿ, ಭಾರತಕ್ಕಿರುವ ನಿಜವಾದ ಅಪಾಯವೆಂದರೆ, ನಮ್ಮ ಪ್ರಧಾನಿ ಅವರಿಗೆ ಏನೂ ಆರ್ಥವಾಗುತ್ತಿಲ್ಲ ಎಂದು. ಅವರಿಗೆ ಸಲಹೆ ನೀಡುವಂತ ಧೈರ್ಯ ಇರುವವರು, ಅವರ ಸುತ್ತಲು ಯಾರೂ ಇಲ್ಲ ಎನ್ನುವುದೇ ಸತ್ಯ ಎಂದಿದ್ದಾರೆ.
ರಾಹುಲ್ ಗಾಂಧಿ ಅವರ ಈ ಹೇಳಿಕೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು, ರಾಹುಲ್ ಗಾಂಧಿ ಅವರಿಗೆ ಅರ್ಥವಾಗುತ್ತಿಲ್ಲ ಎಂದು ಹೇಳುವ ಧೈರ್ಯ ಅವರ ಸುತ್ತಮುತ್ತಲಿನವರಿಗೆ ಇಲ್ಲ. ಪ್ರಧಾನಿ ಅವರ ವಿಚಾರಧಾರೆಗಳನ್ನು ವಿಶ್ವದ ಪ್ರಸಿದ್ದ ಕಂಪೆನಿಯ ಸಿಇಒ ಅವರು ಒಪ್ಪಿಕೊಂಡ ಬಳಿಕ ರಾಹುಲ್ ಗಾಂಧಿ ಪ್ರಧಾನಿ ಅವರನ್ನು ಗೇಲಿ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಅವರು ಕೂಡಾ ಪ್ರತಿಕ್ರಿಯೆ ನೀಡಿದ್ದು, ರಾಹುಲ್ ಅವರೇ, ನಾಳೆ ಬೆಳಗ್ಗೆ ಎದ್ದು ನಾನು ಲಗತ್ತಿಸಿರುವ ಎರಡು ವೈಜ್ಞಾನಿಕ ಪತ್ರಿಕೆಗಳನ್ನು ಓದಿ. ಇದನ್ನು ಓದಿದ ಬಳಿಕ ಈ ವಿಚಾರ ನಿಮಗೆ ಅರ್ಥವಾಗುವುದಿಲ್ಲ ಎಂದಿದ್ದಾರೆ.