ನವದೆಹಲಿ, ಅ. 10 (DaijiworldNews/HR) : ದೇಶದ ಮುಸ್ಲಿಮರು ಪ್ರಪಂಚದಲ್ಲಿಯೇ ಅತ್ಯಂತ ತೃಪ್ತರಾಗಿದ್ದು, ಇಲ್ಲಿ ಎಲ್ಲಾ ಧರ್ಮದ ಜನರು ಅಗತ್ಯ ಬಂದಾಗ ಒಟ್ಟಾಗಿ ನಿಂತುಕೊಂಡಿದ್ದಾರೆ ಎಂಬುದಾಗಿ ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಈ ಕುರಿತು ಸಂದರ್ಶವೊಂದರಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಮುಸ್ಲಿಮರು ಅತ್ಯಂತ ತೃಪ್ತಿಯಿಂದ ಜೀವನ ನಡೆಸುತ್ತಿದ್ದಾರೆ ಅದು ನಮ್ಮ ಭಾರತ ದೇಶದಲ್ಲಿ ಮಾತ್ರ, ದೇಶಿ ಧರ್ಮ ಆಚರಿಸುವ ಜನರು ಅದೇ ದೇಶದಲ್ಲಿ ಇನ್ನೂ ಬದುಕುತ್ತಿದ್ದಾರೆ ಎಂದರೆ ಅದು ಕೂಡ ಭಾರತದಲ್ಲಿ ಮಾತ್ರ ಎಂದರು.
ಇನ್ನು ಪಾಕಿಸ್ತಾನದಲ್ಲಿ ಬೇರೆ ಧರ್ಮಗಳನ್ನು ಆಚರಿಸುವ ಜನರಿಗೆ ಹಕ್ಕು ಇಲ್ಲ, ಮತ್ತು ಪಾಕ್ ನಲ್ಲಿ ಮುಸ್ಲಿಮರಿಗೆ ಪ್ರತ್ಯೇಕ ದೇಶ ನಿರ್ಮಿಸಲಾಗಿದೆ. ಭಾರತದ ಸಂವಿಧಾನದಲ್ಲಿ ಹಿಂದೂಗಳು ಮಾತ್ರ ನೆಲೆಸಬಹುದು, ಜೀವನ ಮಾಡಬಹುದು, ಇಲ್ಲಿ ಹಿಂದೂಗಳು ಶ್ರೇಷ್ಠರು ಎಂದು ಹೇಳಿಕೊಂಡು ಜೀವನ ಮಾಡಬೇಕು ಎಂದು ಯಾವತ್ತೂ ಹೇಳಿಲ್ಲ, ಹಾಗಾಗಿ ಇದು ನಮ್ಮ ದೇಶದ ಸಂಸ್ಕೃತಿ ಎಂದರು.