ನವದೆಹಲಿ, ಅ. 10(DaijiworldNews/PY): ಕೇಂದ್ರ ಸರ್ಕಾರದ ಮೇಲೆ ಪುನಃ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ನಮ್ಮ ಸೈನಿಕರಿಗೆ ಬುಲೆಟ್ ಪ್ರೂಫ್ ರಹಿತ ಟ್ರಕ್ಗಳಲ್ಲಿ ಹುತಾತ್ಮರಾಗಲು ಕಳುಹಿಸುತ್ತಿದ್ದಾರೆ. ಆದರೆ, ಪ್ರಧಾನ ಮಂತ್ರಿಗಾಗಿ 8,400 ಕೋ.ರೂ. ವೆಚ್ಚಮಾಡುತ್ತಿದ್ದೆ ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ನಮ್ಮ ಸೈನಿಕರಿಗೆ ಬುಲೆಟ್ ಪ್ರೂಫ್ ರಹಿತ ಟ್ರಕ್ಗಳಲ್ಲಿ ಹುತಾತ್ಮರಾಗಲು ಕಳುಹಿಸುತ್ತಿದ್ದಾರೆ. ಆದರೆ, ಪ್ರಧಾನ ಮಂತ್ರಿಗಾಗಿ 8400 ಕೋ.ರೂ.ವೆಚ್ಚ ಮಾಡಿ ವಿಮಾನಗಳನ್ನು ಕಳುಹಿಸಲಾಗುತ್ತಿದೆ. ಇದು ನ್ಯಾಯವೇ ಎಂದು ಕೇಳಿದ್ದಾರೆ.
ಟ್ವೀಟ್ನಲ್ಲಿರುವ ವಿಡಿಯೋವೊಂದರಲ್ಲಿ, ವಾಹನದೊಳಗೆ ಕುಳಿತುಕೊಂಡು ಮಾತನಾಡುತ್ತಿರುವ ಜವಾನರು, ಗುಂಡು ನಿರೋಧಕವಿಲ್ಲದ ಟ್ರಕ್ಗಳಲ್ಲಿ ಜನರನ್ನು ಕಳುಹಿಸುವುದು ತುಂಬಾ ಅಪಾಯಕಾರಿಯಾಗಿದೆ. ನಮ್ಮ ಅಧಿಕಾರಿ ಇಂತಹ ವಾಹನಗಳಲ್ಲಿ ಕಳುಹಿಸಿ ನಮ್ಮ ಪ್ರಾಣದೊಂದಿಗೆ ಆಟವಾಡುತ್ತಿದ್ದಾರೆಯೇ ಎಂದು ಚರ್ಚಿಸುತ್ತಿರುವುದು ಕಂಡಿದೆ.
ವಿವಿಐಪಿಗಳಿಗಾಗಿ ಎರಡು ವಿಶೇಷವಾದ ವಿಮಾನವನ್ನು ಖರೀದಿ ಮಾಡಿರುವ ವಿಚಾರವಾಗಿ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.