ಮೈಸೂರು, ಅ. 10 (DaijiworldNews/MB) : ಮೈಸೂರು ದಸರಾದಲ್ಲಿ ಜನ ಸೇರುವುದಕ್ಕೆ ಸಾಹಿತಿ ಎಸ್. ಎಲ್. ಬೈರಪ್ಪ ಅವರು ಆಕ್ಷೇಪ ವ್ಯಕ್ತಪಡಿಸಿದ್ದು, ''ಜಂಬೂಸವಾರಿಯನ್ನು ಮಾವುತರು ಮಾಡುತ್ತಾರೆ. ಇದಕ್ಕೆ ಜನರು ಯಾಕೆ ಸೇರಬೇಕು'' ಎಂದು ಪ್ರಶ್ನಿಸಿದ್ದಾರೆ.
ಈ ಬಗ್ಗೆ ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ''ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ 200 ಜನರೂ ಬೇಡ. ಎಲ್ಲರೂ ಅವರ ಮನೆಯಲ್ಲೇ ದಸರಾ ಪೂಜೆ ಮಾಡಲಿ. ಬೆಟ್ಟದಲ್ಲೂ ಪೂಜೆ ನಡೆಯಲಿ. ಅದಕ್ಕಾಗಿ ಜನರು ಸೇರಿ ಕೊರೊನಾ ಮತ್ತೆ ಹೆಚ್ಚಾದರೆ ಯಾರು ಹೊಣೆಗಾರರಾಗುತ್ತಾರೆ'' ಎಂದು ಕೇಳಿದ್ದಾರೆ.
''ಅಷ್ಟಕ್ಕೂ ಜಂಬೂ ಸವಾರಿ ನಡೆಸುವುದು ಮಾವುತರು. ಅವರು ಇದ್ದರೆ ಸಾಕು ಜನರು ಯಾಕೆ ಬೇಕು. ಕೆಲವರು ದಸರ ಇಲ್ಲದಿದ್ದರೆ ನಮ್ಮ ಬಿಸ್ನೆಸ್ ಹಾಳಾಗುತ್ತದೆ ಎಂದು ಹೇಳುತ್ತಿದ್ದಾರೆ ಆದರೆ ಇವರ ಬಿಸ್ನೆಸ್ಗಾಗಿ ಜನರು ತೊಂದರೆ ಪಡಬೇಕೇ. ಯಾವುದೇ ಕಾರಣಕ್ಕೂ ದಸರಾ ನೆಪದಲ್ಲಿ ಜನರು ಸೇರಬಾರದು'' ಎಂದು ಹೇಳಿದ್ದಾರೆ.