ನವದೆಹಲಿ, ಅ. 10 (DaijiworldNews/MB) : ಅಕ್ಟೋಬರ್ 25 ರಂದು ನಡೆಯಲಿರುವ ತಮ್ಮ ಪ್ರತಿ ತಿಂಗಳ ಕೊನೆಯ ಭಾನುವಾರದ ಕಾರ್ಯಕ್ರಮ 'ಮನ್ ಕಿ ಬಾತ್' ಗಾಗಿ ಆಲೋಚನೆಗಳು ಮತ್ತು ಸಲಹೆಗಳನ್ನು ಹಂಚಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಮನವಿ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ನಾಗರಿಕರು ತಮ್ಮ ಸ್ಪೂರ್ತಿದಾಯಕ ಜೀವನ ಪ್ರಯಾಣದ ಬಗ್ಗೆ ಹಂಚಿಕೊಳ್ಳಲು ಹಾಗೂ ಸಾಮಾಜಿಕ ಬದಲಾವಣೆಗೆ ಶಕ್ತಿ ನೀಡುವ ವಿಷಯಗಳನ್ನು ಚರ್ಚಿಸಲು ಮನ್ ಕಿ ಬಾತ್ ಉತ್ತಮ ಅವಕಾಶವನ್ನು ಒದಗಿಸುತ್ತದೆ. ಈ ತಿಂಗಳ ಕಾರ್ಯಕ್ರಮವು 25 ರಂದು ನಡೆಯಲಿದೆ. ನಿಮ್ಮ ಆಲೋಚನೆಗಳನ್ನು ನಮೋ ಅಪ್ಲಿಕೇಶನ್ನಲ್ಲಿ ಹಂಚಿಕೊಳ್ಳಿ ಎಂದು ಹೇಳಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪ್ರತಿ ತಿಂಗಳ ಕೊನೆಯ ಭಾನುವಾರದಂದು 'ಮನ್ ಕಿ ಬಾತ್' ನಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುತ್ತಾರೆ.