ನವದೆಹಲಿ, ಅ. 10 (DaijiworldNews/PY): ಡ್ರೋನ್ಗಳಿಂದ ಹೆಚ್ಚಿನ ಬೆದರಿಕೆ ಇದೆ ಎಂದು ಸೇನಾ ಸಿಬ್ಬಂದಿ ಉಪ ಮುಖ್ಯಸ್ಥ ಲೆಫ್ಟಿನಂಟ್ ಜನರಲ್ ಎಸ್.ಕೆ.ಸೈನಿ ಹೇಳಿದ್ದಾರೆ.
ಕಡಿಮೆ ವೆಚ್ಚದ ಹಾಗೂ ಬಹು ಬಳಕೆಯ ಡ್ರೋನ್ಗಳು ಮುಂದೆ ಹೆಚ್ಚು ಅಪಾಯಕಾರಿಯಾಗಬಹುದು ಎಂದು ಅವರು ಯುದ್ದ ಅಧ್ಯಯನ ಕೇಂದ್ರ ವತಿಯಿಂದ ಫೋರ್ಸ್ ಪ್ರೊಟಿಕ್ಷನ್ ಇಂಡಿಯಾ 202 ವಿಷಯದಡಿ ನಡೆದ ವೆಬಿನಾರ್ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಡ್ರೋನ್ನಿದಾಗುವ ಅಪಾಯಗಳ ಕುರಿತು ಸೇನೆ ತಯಾರು ಮಾಡಿಕೊಳ್ಳಬೇಕು. ಇದೀಗ ಸೈನ್ಯವು ಅವುಗಳನ್ನು ಯೋಜಿಸಬೇಕಾಗಿದೆ ಎಂದು ಹೇಳಿದ್ದಾರೆ.
ಈ ವೇಳೆ, ಸಶಸ್ತ್ರ ಪಡೆಗಳ ರಕ್ಷಣೆಯ ಅವಶ್ಯಕತೆಗಳಿಗೆ ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ ಚರ್ಚೆ ಮಾಡಲಾಯಿತು.
50 ಡಿಗ್ರಿ ಸೆಲ್ಸಿಯಸ್ ತಾಪಮಾನವಿರುವ ಎತ್ತರದ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ಸೈನಿಕರನ್ನು ನಿಯೋಜಿಸಲಾಗಿದೆ. ಆದರೆ, ಭಾರತವು ಇನ್ನೂ ಶೀತ-ಹವಾಮಾನ ಬಟ್ಟೆ ಮತ್ತು ಉಪಕರಣಗಳನ್ನು ಆಮದು ಮಾಡಿಕೊಳ್ಳುತ್ತಿದೆ ಎಂದಿದ್ದಾರೆ.
ಇದರ ಪೂರೈಕೆಯನ್ನು ಈಡೇರಿಸಲು ನಮ್ಮಲ್ಲೇ ಇದರ ಉತ್ಪಾದನೆಯನ್ನು ಆರಂಭಿಸಬೇಕು. ಆಧುನಿಕ ಶಸ್ತ್ರಾಸ್ತ್ರ, ಮದ್ದುಗುಂಡು, ರಕ್ಷಣೆ ಹಾಗೂ ಬಟ್ಟೆಗಳ ವಿಷಯದಲ್ಲಿ ಭಾರತೀಯ ಸೇನೆಯು ಗಣನೀಯವಾಗಿ ವಿಕಸನಗೊಂಡಿದೆ. ಆದರೆ ಹೊಸತನಕ್ಕೆ ಇನ್ನೂ ಹೆಚ್ಚಿನ ಅವಕಾಶವಿದೆ ಎಂದು ಹೇಳಿದ್ದಾರೆ.