ನವದೆಹಲಿ, ಅ. 11 (DaijiworldNews/MB) : ಭೂ ವಿವಾದಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಗೊಂಡಾದಲ್ಲಿ ದೇವಾಲಯದ ಅರ್ಚಕರೋರ್ವರಿಗೆ ಗುಂಡು ಹಾರಿಸಲಾಗಿರುವ ಕುರಿತಾದ ವರದಿಯ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ವಕ್ತಾರ ರಣ್ದೀಪ್ ಸಿಂಗ್ ಸುರ್ಜೆವಾಲಾ ಅವರು, ಹೋ ಮರೆತುಬಿಟ್ಟೆ, ಆದಿತ್ಯನಾಥ್ ಮತ್ತು ಬಿಜೆಪಿಯಿಂದ ಉತ್ತರ ಕೇಳುವುದನ್ನು ನಿಷೇಧಿಸಲಾಗಿದೆ ಎಂದು ಲೇವಡಿ ಮಾಡಿದ್ದಾರೆ.
ಭೂ ವಿವಾದಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಗೊಂಡಾದಲ್ಲಿ ದೇವಾಲಯದ ಅರ್ಚಕರಾದ ಸಾಮ್ರಾತ್ ದಾಸ್ ಎಂಬವರಿಗೆ ಗುಂಡು ಹಾರಿಸಲಾಗಿದೆ.
ಈ ಬಗ್ಗೆ ಮಾಧ್ಯಮವೊಂದರ ವರದಿಯನ್ನು ಉಲ್ಲೇಖ ಮಾಡಿ ಟ್ವೀಟ್ ಮಾಡಿರುವ ಸುರ್ಜೆವಾಲಾ ಅವರು, ''ಈಗ ಗೊಂಡಾದಲ್ಲಿ, ಯು.ಪಿ.ಯಲ್ಲಿ ದೇವಾಲಯದ ಅರ್ಚಕರಿಗೆ ಗೂಂಡಾಗಳೂ ಗುಂಡು ಹಾರಿಸಿದ್ದಾರೆ. ರಾಜಸ್ಥಾನದಂತೆಯೇ ಇಲ್ಲಿನ ಹಿಂದಿ ಚಾನೆಲ್ಗಳು ಅದರ ಸಿಬ್ಬಂದಿಗಳು ಕೂಡಾ ಹೊಣೆಗಾರಿಕೆಯನ್ನು ಹೊರಬೇಕೆಂದು ಕೋರುತ್ತೇನೆ. ಹೋ ಮರೆತುಬಿಟ್ಟೆ, ಆದಿತ್ಯನಾಥ್ ಮತ್ತು ಬಿಜೆಪಿಯಿಂದ ಉತ್ತರ ಕೇಳುವುದನ್ನು ನಿಷೇಧಿಸಲಾಗಿದೆ'' ಎಂದು ವ್ಯಂಗ್ಯವಾಡಿದ್ದಾರೆ.