ನವದೆಹಲಿ, ಅ.11 (DaijiworldNews/PY): ಸ್ವಾಮಿತ್ವ ಯೋಜನೆಯಡಿ ಪ್ರಾಪರ್ಟಿ ಕಾರ್ಡ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಪರೆನ್ಸ್ ಮೂಲಕ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಗ್ರಾಮೀಣ ಭಾರತದ ಏಳ್ಗೆಗೆ ಈ ಯೋಜನೆಯು ಮುಖ್ಯವಾಗಿದೆ ಎಂದಿದ್ದಾರೆ.
ಒಂದು ಲಕ್ಷ ಲಕ್ಷ ಆಸ್ತಿ ಹೊಂದಿರುವವರಿಗೆ ತಮ್ಮ ಮೊಬೈಲ್ಗೆ ಕಳುಹಿಸಿದ ಲಿಂಕ್ ಮೂಲಕ ಆಸ್ತಿ ಕಾರ್ಡ್ಗಳನ್ನು ಡೌನ್ಲೋಡ್ ಮಾಡಲು ಆಗುತ್ತದೆ. ಗ್ರಾಮಸ್ಥರು ಸಾಲವನ್ನು ಹಾಗೂ ಆಸ್ತಿಯನ್ನು ಆರ್ಥಿಕ ಆಸ್ತಿಯನ್ನಾಗಿ ಉಪಯೋಗಿಸಲು ಯೋಜನೆಯು ಸಹಾಯಕವಾಗಿದೆ ಎಂದು ಪ್ರಧಾನಿಮಂತ್ರಿ ಕಚೇರಿ ತಿಳಿಸಿದೆ.
ರಾಜ್ಯ ಸರ್ಕಾರಗಳು, ಆಸ್ತಿ ಕಾರ್ಡ್ ಡೌನ್ಲೋಡ್ ಆದ ಬಳಿಕ ಆಸ್ತಿ ಕಾರ್ಡ್ಗಳನ್ನು ನೀಡಲಿವೆ. ಈ ಯೋಜನೆಯಲ್ಲಿ ಕರ್ನಾಟಕದ 2, ಮಹಾರಾಷ್ಟ್ರದಿಂದ 221, ಉತ್ತರಪ್ರದೇಶದ 346 ಸೇರಿದಂತೆ ಆರು ರಾಜ್ಯಗಳ 746 ಹಳ್ಳಿಗಳ ಫಲಾನಭವಿಗಳು ಇದ್ದಾರೆ ಎಂದು ಮಾಹಿತಿ ನೀಡಿದೆ.