ನವದೆಹಲಿ, ಅ. 11 (DaijiworldNews/MB) : ''ಕೇಂದ್ರ ಸರ್ಕಾರವು ಮೊದಲ ಹಂತದಲ್ಲಿ ನೀಡಿದ ಕೊರೊನಾ ಅನುದಾನವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಮಹಾರಾಷ್ಟ್ರ, ಚಂಡೀಗಡ ಹಾಗೂ ದೆಹಲಿ ವಿಫಲವಾಗಿದೆ'' ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಭಾನುವಾರ ಬಹಿರಂಗಪಡಿಸಿದ್ದಾರೆ.
ಸಚಿವರು ತಮ್ಮ ವಾರದ ವೆಬಿನಾರ್, ಸಂಡೇ ಸಂವಾದ್ನಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿ ಅನುದಾನ ಬಳಕೆಯ ಅಂಕಿ ಅಂಶಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
''ನೀಡಲಾದ ಒಟ್ಟು ಅನುದಾನದ ಅರ್ಧದಷ್ಟು ಹಣವನ್ನು ಸಹ ಬಳಸಲಾಗದ ಕಾರಣ ಮಹಾರಾಷ್ಟ್ರ ಮತ್ತು ಚಂಡೀಗಡವು ಬಳಸದ ಕಾರಣ ಸಂಕಷ್ಟ ಉಂಟಾಗಿದೆ. ಮೊದಲ ಹಂತದಲ್ಲಿ ಭಾರತ ಸರ್ಕಾರವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 3,000 ಕೋಟಿ ರೂ. ಬಿಡುಗಡೆ ಮಾಡಿದೆ. ಆದರೆ ಈ ಮೂರು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶ ಹೊರತುಪಡಿಸಿ ಉಳಿದೆ ಎಲ್ಲಾ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳು ನೀಡಿರುವ ಅನುದಾನವನ್ನು ಬಳಸಿಕೊಂಡಿದ್ದಾರೆ" ಎಂದು ಹೇಳಿದ್ದಾರೆ.
"ಮಹಾರಾಷ್ಟ್ರವು ಶೇ. 42.5 ಕೊರೊನಾ ಅನುದಾನವನ್ನು ಬಳಸಿದ್ದು ಚಂಡೀಗಡವು ಶೇ.47.8 ಮತ್ತು ದೆಹಲಿಯು ಶೇ. 75.4 ಅನುದಾನವನ್ನು ಬಳಸಿಕೊಂಡಿದೆ" ಎಂದು ವರ್ಧನ್ ಮಾಹಿತಿ ನೀಡಿದ್ದಾರೆ.