ಬೆಂಗಳೂರು, ಅ. 12 (DaijiworldNews/PY): ರಾಜ್ಯ ರಾಜಕೀಯದಲ್ಲಿ ದಿಢೀರ್ ಬೆಳವಣಿಗೆಯಾಗಿದ್ದು, ಈ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಸಚಿವ ಶ್ರೀರಾಮುಲು ಅವರು, ಕೊರೊನಾ ನಿರ್ವಹಣೆಯಲ್ಲಿ ವಿಫಲನಾಗಿದ್ದೇನೆ ಎಂದು ಕಳಂಕ ತರಬೇಡಿ ಎಂದಿದ್ದಾರೆ.
ಶ್ರೀರಾಮುಲು ಅವರು ತನ್ನ ಖಾತೆ ಬದಲಾವಣೆ ಬಗ್ಗೆ ನಿನ್ನೆ ರಾತ್ರಿ ಸಿಎಂ ಬಿಎಸ್ವೈ ಅವರಿಗೆ ಕರೆ ಮಾಡಿ ಚರ್ಚೆ ಮಾಡಿದ್ದು, ಇಂದು ಬೆಳಗ್ಗೆ ಭೇಟಿ ಮಾಡುವಂತೆ ಸಿಎಂ ಹೇಳಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ನಿನ್ನೆ ರಾತ್ರಿ ದೂರವಾಣಿ ಕರೆಯಲ್ಲಿ ಮಾತನಾಡಿರುವ ಶ್ರೀರಾಮುಲು ಅವರು, ಈ ಸಂದರ್ಭ ಖಾತೆ ಬದಲಾವಣೆ ಮಾಡಬೇಡಿ. ಸ್ವಲ್ಪ ಸಮಯ ನೀಡಿ ನಾನೇ ಆರೋಗ್ಯ ಇಲಾಖೆಯನ್ನು ಬಿಟ್ಟು ಕೊಡುತ್ತೇನೆ. ಕೊರೊನಾ ನಿರ್ವಹಣೆಯಲ್ಲಿ ವಿಫಲನಾಗಿದ್ದೇನೆ ಎನ್ನುವ ಕಳಂಕ ಬರುವುದು ಬೇಡ ಎಂದು ಹೇಳಿರುವುದಾಗಿ ತಿಳಿದುಬಂದಿದೆ.