ಬೆಂಗಳೂರು,ಅ. 12 (DaijiworldNews/HR): 4 ವರ್ಷದ ಮಗುವನ್ನು ಅಪಹರಿಸಿ, ಅತ್ಯಾಚಾರ ಮಾಡಿದ್ದ ಆರೋಪಿಯನ್ನು ಪೊಲಿಸರು ಬಂಧಿಸಲು ಹೋದಾಗ ಅವರ ಮೇಲೆ ಹಲ್ಲೆಗೆ ಯತ್ನಿಸಿದ ಕಾರಣ ಇನ್ ಸ್ಪೆಕ್ಟರ್ ಸುನೀಲ್ ನಾಯ್ಕ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ.
ಆರೋಪಿಯನ್ನು ಚೆನ್ನೈ ಮೂಲದ ದಿನೇಶ್ ಎಂದು ಗುರುತಿಸಲಾಗಿದೆ.
ಇನ್ನು ಗುಂಡೇಟಿನಿಂದ ಗಾಯಗೊಂಡಿರುವ ಆರೋಪಿ ದಿನೇಶ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆತ ಆದಿತ್ಯವಾರ ಮಧ್ಯಾಹ್ನ ನಾಲ್ಕು ವರ್ಷದ ಮಗುವನ್ನು ಮೆಜಿಸ್ಟಿಕ್ ನಿಂದ ಅಪಹರಿಸಿದ್ದು, ನಂತರ ನಿರ್ಜನ ಪ್ರದೇಶಕ್ಕೆ ಮಗುವನ್ನು ಕರೆದೊಯ್ದು ಲೈಂಗಿನ ದೌರ್ಜನ್ಯ ವೆಸಗಿದ್ದ. ಮಗುವಿನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು ಪರಾರಿಯಾಗಿದ್ದ ಆರೋಪಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದರು. ಆರೋಪಿ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆತನನ್ನು ಬಂಧಿಸಲು ಆರ್ ಆರ್ ಕಲ್ಯಾಣ ಮಂಟಪದ ಬಳಿ ಹೋದಾಗ ಆತ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದು, ಶ್ರೀರಾಂಪುರ ಪೊಲೀಸ್ ಠಾಣೆ ಇನ್ ಸ್ಪೆಕ್ಟರ್ ಸುನೀಲ್ ನಾಯ್ಕ ಆರೋಪಿಯ ಆತನ ಕಾಲಿಗೆ ಗುಂಡೇಟು ಹಾಕಿ ಬಂಧಿಸಿದ್ದಾರೆ.