ಹೊಸದಿಲ್ಲಿ, ಅ. 12 (DaijiworldNews/HR): ಯಾವ ಧರ್ಮವೂ ಜೀವಗಳನ್ನು ಅಪಾಯಕ್ಕೆ ಒಡ್ಡಿ ಹಬ್ಬ ಆಚರಿಸಬೇಕು ಎಂದು ಹೇಳುವುದಿಲ್ಲ, ನೀವು ನಿಮ್ಮ ಮನೆಯಲ್ಲೇ ಇದ್ದು ದೇವರನ್ನು ಪ್ರಾರ್ಥಿಸಬಹುದು ಎಂಬುದಾಗಿ ಕೇಂದ್ರ ಆರೋಗ್ಯ ಸಚಿವ ಡಾ| ಹರ್ಷವರ್ಧನ್ ಹೇಳಿದ್ದಾರೆ.
ಮುಂಬರುವ ದಿನಗಳಲ್ಲಿ ಅನೇಕಹಬ್ಬ-ಹರಿದಿನಗಳು ಬರಲಿದ್ದು ಆ ನೆಪದಲ್ಲಿ ಜನರು ಗುಂಪುಗೂಡಿ ಒಂದೆಡೆ ಸೇರಿ ಕೊರೊನಾ ಸೋಂಕನ್ನು ಆಹ್ವಾನಿಸದಂತೆ ತಡೆಯುವ ನಿಟ್ಟಿನಲ್ಲಿ ಮನೆಯಲ್ಲಿ ಇದ್ದು ಹಬ್ಬ ಆಚರಿಸಿ ಎಂದು ಸಲಹೆ ನೀಡಿದ್ದಾರೆ.
ಜೀವಗಳನ್ನು ಅಪಾಯಕ್ಕೆ ತಳ್ಳಿ ಹಬ್ಬಗಳನ್ನು ಆಚರಿಸಬೇಕು ಎಂದು ಯಾವ ಧರ್ಮವೂ ಹೇಳುವುದಿಲ್ಲ. ಪ್ರಸ್ತುತ ನಮ್ಮೆಲ್ಲರಿಗೂ ಕೊರೊನಾ ಸೋಂಕನ್ನು ನಾಶ ಮಾಡುವುದು ಒಂದೇ ಗುರುಯಾಗಿದ್ದು, ಅದನ್ನೇ ನಮ್ಮ ಧರ್ಮವೆಂದು ಭಾವಿಸೋಣ.
ಇನ್ನು ಮನೆಗಳಲ್ಲೇ ಇದ್ದು ಕುಟುಂಬ ಸದಸ್ಯರ ಜತೆಗೆ ಹಬ್ಬದ ಸಂಭ್ರಮವನ್ನು ಸವಿಯೋಣ ಎಂದು ಹರ್ಷವರ್ಧನ್ ಹೇಳಿದ್ದಾರೆ.