ನವದೆಹಲಿ, ಅ. 12 (DaijiworldNews/PY): ಜಿಎಸ್ಟಿ ಪರಿಹಾರದ ವಿಷಯದಲ್ಲಿ ಸಾಲ ಪಡೆದುಕೊಳ್ಳುವ ಕೇಂದ್ರದ ಪ್ರಸ್ತಾಪಕ್ಕೆ ಒಪ್ಪಿಗೆ ಸೂಚಿಸಿರುವ ರಾಜ್ಯ ಸರ್ಕಾರಗಳ ನಿಲುವನ್ನು ಟೀಕಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ನಿಮ್ಮ ಭವಿಷ್ಯವನ್ನು ನಿಮ್ಮ ಮುಖ್ಯಮಂತ್ರಿಗಳು ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಏಕೆ ಅಡ ಇಡುತ್ತಾರೆ? ಎಂದು ಕೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕೇಂದ್ರ ಸರ್ಕಾರವು, ಜಿಎಸ್ಟಿ ಆದಾಯ ನೀಡಲಾಗುವುದು ಎಂದು ರಾಜ್ಯಗಳಿಗೆ ಆಶ್ವಾಸನೆ ನೀಡಿತ್ತು. ಪ್ರಧಾನ ಮಂತ್ರಿ ಹಾಗೂ ಕೊರೊನಾದಿಂದ ಆರ್ಥಿಕತೆ ಅಸ್ತವ್ಯಸ್ತವಾಗಿದೆ. ಪ್ರಧಾನಿ ಕಾರ್ಪೋರೇಟರ್ ಸಂಸ್ಥೆಗಳಿಗೆ 1.4 ಲಕ್ಷ ಕೋಟಿ. ರೂ ತೆರಿಗೆ ಕಡಿತದ ನೆರವು ಹಾಗೂ ತಮಗಾಗಿ 8,400 ಕೋಟಿ ವೆಚ್ಚದಲ್ಲಿ ಎರಡು ವಿಮಾನಗಳ ಖರೀದಿ. ಕೇಂದ್ರ ಸರ್ಕಾರದ ಬಳಿ ರಾಜ್ಯ ಸರ್ಕಾರಗಳಿಗೆ ನೀಡಲು ಹಣವಿಲ್ಲ. ಸಾಲ ಪಡೆದುಕೊಳ್ಳಲು ರಾಜ್ಯಗಳಿಗೆ ಹಣಕಾಸು ಸಚಿವರ ಸಲಹೆ ಎನ್ನುವ ಐದು ಅಂಶಗಳನ್ನು ಉಲ್ಲೇಖಿಸಿದ್ದಾರೆ.
ನಿಮ್ಮ ಭವಿಷ್ಯವನ್ನು ನಿಮ್ಮ ಮುಖ್ಯಮಂತ್ರಿಗಳು ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಏಕೆ ಅಡ ಇಡುತ್ತಾರೆ? ಎಂದು ಕೇಳಿದ್ದಾರೆ.
ಜಿಎಸ್ಟಿ ಪರಿಹಾರ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರದ ಪ್ರಸ್ತಾಪಕ್ಕೆ 21 ರಾಜ್ಯಗಳು ಬೆಂಬಲ ನೀಡಿದ್ದು, ಪರಿಹಾರದ ಕೊರತೆಯನ್ನು ಪೂರೈಸಲು 1.10 ಲಕ್ಷ ಕೋಟಿ ರೂ. ಸಾಲ ಪಡೆದುಕೊಳ್ಳಲು ತಯಾರಾಗಿವೆ.