ನವದೆಹಲಿ,ಅ. 12 (DaijiworldNews/HR): ಪಾಕ್-ಚೀನಾ ಗಡಿಯಲ್ಲಿ ನಿರ್ಮಿಸಿರುವ 44 ಸೇತುವೆಗಳನ್ನು ಏಕಕಾಲಕ್ಕೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲೋಕಾರ್ಪಣೆಗೊಳಿಸಿದ್ದಾರೆ.
ರಾಜನಾಥ್ ಸಿಂಗ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಜಮ್ಮು ಕಾಶ್ಮೀರದಲ್ಲಿ 10, ಲಡಾಖ್ನಲ್ಲಿ 8, ಹಿಮಾಚಲಪ್ರದೇಶದಲ್ಲಿ 3, ಪಂಜಾಬ್ನಲ್ಲಿ 4, ಉತ್ತರಾಖಂಡ್ನಲ್ಲಿ 8 , ಅರುಣಾಚಲದಲ್ಲಿ 8 ಹಾಗೂ ಸಿಕ್ಕಿಂನಲ್ಲಿ 4 ಸೇತುವೆಗಳನ್ನು ಉದ್ಘಾಟಿಸಿದ್ದಾರೆ.
ಬಳಿಕ ಮಾತನಾಡಿದ ರಾಜನಾಥ್ ಸಿಂಗ್, ಲಡಾಕ್ನಲ್ಲಿ ನಿರ್ಮಿಸಿರುವ ಎಲ್ಲಾ 44 ಬ್ರಿಡ್ಜ್ಗಳ ಮೂಲಕ ಸೇನಾ ಪಡೆಗಳು ತಮ್ಮ ಶಸ್ತ್ರಾಸ್ತ್ರಗಳನ್ನು ಸುಲಭವಾಗಿ ಸಾಗಿಸಲು ಅನುಕೂಲವಾಗುವಂತೆ ನಿರ್ಮಿಸಲಾಗಿದೆ ಎಂದರು.
ಇನ್ನು ಈ ಸೇತುವೆಗಳು ಕೇವಲ ಸೇನಾ ವಾಹನ ಸಂಚಾರಕ್ಕೆ ಮಾತ್ರವಲ್ಲದೆ ಸಾರ್ವಜನಿಕರ ಪ್ರಯಾಣಕ್ಕೂ ಅನುಕೂಲವಾಗುವಂತೆ ಬಾರ್ಡರ್ ರೋಡ್ ಆರ್ಗನೈಸೇಶನ್ ಮೂಲಕ ನಿರ್ಮಿಸಲಾಗಿದೆ ಎಂದು ತಿಳಿದರು.