ನವದೆಹಲಿ, ಅ. 13 (DaijiworldNews/MB) : ಮೊಬೈಲ್ ಫೋನ್ಗಳಿಂದ ಹೊರ ಬರುವ ರೇಡಿಯೇಷನ್ ಅನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುವ ಗೋವಿನ ಸಗಣಿಯಿಂದ ಮಾಡಿದ 'ಚಿಪ್' ಅನ್ನು ರಾಷ್ಟ್ರೀಯ ಕಾಮಧೇನು ಆಯೋಗ (ಆರ್ಕೆಎ) ಅಧ್ಯಕ್ಷ ವಲ್ಲಭಭಾಯ್ ಬಿಡುಗಡೆ ಮಾಡಿದ್ದಾರೆ.
''ಗೋವಿನ ಸಗಣಿಯಿಂದ ಮಾಡಿದ ಈ 'ಚಿಪ್' ರೋಗಗಳಿಂದ ರಕ್ಷಣೆ ನೀಡುತ್ತದೆ'' ಎಂದು ವಲ್ಲಭಭಾಯ್ ಅವರು ಹೇಳಿದ್ದಾರೆ.
ಹಸುವಿನ ಉತ್ಪನ್ನಗಳನ್ನು ಉತ್ತೇಜಿಸುವಲ್ಲಿ ತೊಡಗಿರುವ ರಾಷ್ಟ್ರವ್ಯಾಪಿ ಅಭಿಯಾನವಾದ 'ಕಾಮಧೇನು ದೀಪಾವಳಿ ಅಭಿಯಾನ' ವನ್ನು ಆರಂಭಿಸಿದ ಮಾತನಾಡಿದ ಅವರು, "ಹಸುವಿನ ಸಗಣಿ ಎಲ್ಲರನ್ನೂ ರಕ್ಷಿಸುತ್ತದೆ. ಇದು ರೇಡಿಯೇಷನ್ ವಿರೋಧಿ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಈ ಚಿಪ್ಗಳನ್ನು ರೇಡಿಯೇಷನ್ ಕಡಿಮೆ ಮಾಡಲು ಮೊಬೈಲ್ ಫೋನ್ಗಳಲ್ಲಿ ಬಳಸಬಹುದಾಗಿದೆ. ಇದು ನಮ್ಮನ್ನು ರೋಗಗಲ್ಲಿಂದಲೂ ರಕ್ಷಿಸುತ್ತದೆ" ಎಂದು ಹೇಳಿದ್ದಾರೆ.
'ಚಿಪ್' ಅನ್ನು ರಾಜಕೋಟ ಮೂಲದ ಶ್ರೀಜಿ ಗೋಶಾಲೆಯಲ್ಲಿ ತಯಾರಿಸಿದ್ದಾರೆ ಮತ್ತು ಇದನ್ನು ಗೋ ಸತ್ವ ಕವಚ ಎಂದು ಕರೆಯಲಾಗುತ್ತದೆ.
ಹಸುಗಳ ಅಭಿವೃದ್ಧಿ ಮತ್ತು ಅವುಗಳ ಸಂತತಿಯನ್ನು ಸಂರಕ್ಷಿಸಲು, ರಕ್ಷಿಸುವ ನಿಟ್ಟಿನಲ್ಲಿ ಆರ್ಕೆಎ 2019 ರಿಂದ ಕಾರ್ಯನಿರ್ವಹಿಸುತ್ತಿದ್ದು ದೀಪಾವಳಿ ಸಂದರ್ಭದಲ್ಲಿ ಗೋ ಉತ್ಪನ್ನಗಳ ಬಳಕೆಯನ್ನು ಉತ್ತೇಜಿಸಲು ಸಂಸ್ಥೆ ರಾಷ್ಟ್ರವ್ಯಾಪಿ ಅಭಿಯಾನವನ್ನು ಪ್ರಾರಂಭಿಸಿದೆ.