ಲಕ್ನೋ,ಅ. 13 (DaijiworldNews/HR): ಉತ್ತರ ಪ್ರದೇಶದ ಹತ್ರಸ್ ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರದಲ್ಲಿ ಸಾವನ್ನಪ್ಪಿದ ಸಂತ್ರಸ್ಥೆಯ ಕುಟುಂಬ ಪ್ರಕರಣವನ್ನು ಉತ್ತರ ಪ್ರದೇಶದಿಂದ ಬೇರೆ ಕೋರ್ಟ್ ಗೆ ವರ್ಗಾಯಿಸುವಂತೆ ಮನವಿ ಮಾಡಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಂತ್ರಸ್ತೆ ಪರ ವಕೀಲೆ ಸೀಮಾ ಕುಶ್ವಾಹ , ಅಲಹಾಬಾದ್ ಕೋರ್ಟ್ ನಿಂದ ದೆಹಲಿ ಅಥವಾ ಮುಂಬಯಿ ಕೋರ್ಟ್ ಗೆ ಶಿಫ್ಟ್ ಮಾಡುವಂತೆ ಸಂತ್ರಸ್ತೆಯ ಕುಟುಂಬ ಮನವಿ ಮಾಡಿದೆ ಎಂದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮೂಹಿಕ ಅತ್ಯಾಚಾರ ಮತ್ತು ಸಂತ್ರಸ್ಥೆಯ ಶವ ಸಂಸ್ಕಾರದ ವಿಷಯದಲ್ಲಿ ವಿವಾದ ಸೃಷ್ಟಿಯಾಗಿತ್ತು. ಇದೀಗ ನಿನ್ನೆ ಬೆಳಗ್ಗೆ ಪೊಲೀಸ್ ಬಿಗಿಭದ್ರತೆಯಲ್ಲಿ ಲಖನೌ ಪೀಠದ ಮುಂದೆ ಹಾಜರಾದ ಸಂತ್ರಸ್ಥ ಯುವತಿಯ ತಂದೆ, ತಾಯಿ ಮತ್ತು ಮೂವರು ಸೋದರರು ವಿವರ ನೀಡಿದ್ದಾರೆ.