ಭೋಪಾಲ್, ಅ. 13 (DaijiworldNews/HR): ಮಧ್ಯಪ್ರದೇಶದ 14 ಸಚಿವರ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಹಾಗೂ ಅಧಿಕಾರದ ದುರ್ಬಳಕೆಗೆ ಸಂಬಂಧಿಸಿದಂತೆ ಕ್ರಮ ಜರುಗಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಈ ಆರೋಪವನ್ನು ತಳ್ಳಿ ಹಾಕಿರುವ ಬಿಜೆಪಿಯು ತನ್ನ ಯಾವುದೇ ಅಭ್ಯರ್ಥಿಯು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿಲ್ಲ ಎಂದು ಪ್ರತಿಪಾದಿಸಿದೆ.
ಇನ್ನು ಶಾಸಕ ಸ್ಥಾನ ಮತ್ತು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿರುವ 14 ಮಂದಿ ಈಗ ಸಚಿವರಾಗಿದ್ದಾರೆ. ಸದ್ಯ ನಡೆಯಲಿರುವ ಉಪಚುನಾವಣೆಯಲ್ಲಿ ಅಭ್ಯರ್ಥಿಗಳಾಗಿದ್ದಾರೆ.
ಈ ಆರೋಪಗಳನ್ನು ಹತಾಶೆಯಿಂದ ಮಾಡಿದ್ದಾರೆ. ಈ ಸಚಿವರು ಈಗ ಜನತಾ ನ್ಯಾಯಾಲಯದ ಮುಂದೆ ಇದ್ದಾರೆ. ಅವರ ಹಣೆಬರಹ ಅಲ್ಲಿಯೇ ತೀರ್ಮಾನವಾಗಲಿ.
ಸಚಿವರುಗಳು ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಮತದಾರರನ್ನು ಸೆಳೆಯಲು ಸುಳ್ಳು ಯೋಜನೆ ಘೋಷಿಸುತ್ತಿದ್ದು, ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ನರೇಂದ್ರ ಸಿಂಗ್ ಸಲುಜಾ ಆರೋಪಿಸಿದ್ದು, ಇದನ್ನು ತಳ್ಳಿಹಾಕಿರುವ ಬಿಜೆಪಿ ವಕ್ತಾರ ಪಂಕಜ್ ಚತುರ್ವೇದಿ ಅವರು, ಈ ಆರೋಪಗಳನ್ನು ಹತಾಶೆಯಿಂದ ಮಾಡಿದ್ದಾರೆ. ಈ ಸಚಿವರು ಈಗ ಜನತಾ ನ್ಯಾಯಾಲಯದ ಮುಂದೆ ಇದ್ದಾರೆ. ಅವರ ಹಣೆಬರಹ ಅಲ್ಲಿಯೇ ತೀರ್ಮಾನವಾಗಲಿ ಎಂದರು.