ಬೆಂಗಳೂರು, ಅ. 13 (DaijiworldNews/PY): ಏಕತ್ವಂ ಶೀರ್ಷಿಕೆಯ ವಿಡಿಯೋ ಜಾಹೀರಾತಿನ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಈ ಜಾಹೀರಾತನ್ನು ಆಭರಣ ಸಂಸ್ಥೆ ತನಿಷ್ಕ್ ತೆಗೆದುಹಾಕಿದೆ.
ಈ ಜಾಹೀರಾತನ್ನು ವೀಕ್ಷಿಸಿರುವ ಹಲವು ಜನರು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದು, ಈ ವಿಡಿಯೋ ಲವ್ ಜಿಹಾದ್ ಅನ್ನು ಪ್ರಚುರ ಪಡಿಸಿದೆ. ಇಂತಹ ವಿಡಿಯೋಗಳನ್ನು ಪ್ರಕಟಿಸಿರುವ ಸಂಸ್ಥೆಯನ್ನು ನಿಷೇಧ ಮಾಡಬೇಕು ಎಂದು ಅಭಿಯಾನ ನಡೆಸಿದ್ದಾರೆ.
ಆಭರಣದ ಜಾಹೀರಾತು ವಿಡಿಯೋದಲ್ಲಿ ಮುಸ್ಲಿಂ ಕುಟುಂಬದಲ್ಲಿರುವ ಹಿಂದೂ ಮಹಿಳೆಯೋರ್ವರಿಗೆ ಸೀಮಂತ ಕಾರ್ಯಕ್ರಮ ಆಯೋಜನೆ ಮಾಡಿರುವದನ್ನು ಕಾಣಬಹುದಾಗಿದೆ. ಕುಟುಂಬವು ಹಿಂದೂ ಸಂಪ್ರದಾಯದಂತೆ ಸೀಮಂತಕ್ಕೆ ತಯಾರು ಮಾಡಿ ಮಹಿಳೆಗೆ ನೀಡುವ ದೃಶ್ವನ್ನು ನೋಡಬಹುದಾಗಿದೆ.
ಈ ಜಾಹೀರಾತಿನ ಬಗ್ಗೆ ಪ್ರತಿಕ್ರಿಯಿಸಿರುವ ಟ್ವೀಟಿಗರು, ಎರಡೂ ರೀತಿಯಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಎರಡು ಧರ್ಮಗಳು, ಆಚರಣೆ ಹಾಗೂ ಸಂಸ್ಕೃತಿಗಳನ್ನು ಬೆಸೆದಿರುವ ದೃಶ್ಯವನ್ನು ಕಾಣಬಹುದಾಗಿದೆ. ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಸಂಸ್ಥೆ ಎಲ್ಲಾ ವೇದಿಕೆಗಳಿಂದ ವಿಡಿಯೋವನ್ನು ತೆಗೆದು ಹಾಕಿದೆ.
ಇದರ ಬಗ್ಗೆ ಟ್ವೀಟ್ ಮಾಡಿರುವ ಶಶಿ ತರೂರು ಅವರು, ಹಿಂದುತ್ವ ಮತಾಂಧರು ಎಂದಿದ್ದಾರೆ.