ಚೆನ್ನೈ, ಅ. 13 (DaijiworldNews/PY): ನಾನು ಬುದ್ದಿಮಾಂದ್ಯ ಪಕ್ಷದಿಂದ ಹೊರಬಂದಿದ್ದೇನೆ ಎಂದು ನಟಿ ಖುಷ್ಬೂ ಸುಂದರ್ ಲೇವಡಿ ಮಾಡಿದ್ದಾರೆ.
ನಟಿ ಖುಷ್ಬೂ ಸುಂದರ್ ಅವರು ಕೈ ಪಕ್ಷಕ್ಕೆ ಗುಡ್ ಬೈ ಹೇಳಿ ಸೋಮವಾರ ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು.
ಇಂದು ಚೆನ್ನೈನಲ್ಲಿ ಸುದ್ದಗಾರರೊಂದಿಗೆ ಮಾತನಾಡಿರುವ ಅವರು, ನಾನು ಕಳೆದ ಆರು ವರ್ಷಗಳಿಂದ ಕಾಂಗ್ರೆಸ್ನಲ್ಲಿದ್ದೆ. ಪಕ್ಷಕ್ಕಾಗಿ ಸಾಕಷ್ಟು ಶ್ರಮವಹಿಸಿದ್ದೇನೆ. ಆದರೆ, ಇದೀಗ ಬುದ್ದಿಮಾಂದ್ಯ ಪಕ್ಷದಿಂದ ಹೊರಬಂದಿದ್ದೇನೆ. ಕಾಂಗ್ರೆಸ್ ಪಕ್ಷ ತ್ಯಜಿಸಿದ ಬಳಿಕ ನಾನು ಇಷ್ಟು ದಿವಸ ಬುದ್ದಿಮಾಂದ್ಯ ಪಕ್ಷದಲ್ಲಿ ಇದ್ದೆ ಎಂದು ತಿಳಿದಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ಪಕ್ಷದ ನಾಯಕ ಕೆ.ಎಸ್. ಅಲಗಿರಿ ಅವರು, ಖುಷ್ಬೂ ಅವರು ಪಕ್ಷ ತ್ಯಜಿಸಿದ್ದಕ್ಕೆ ನಮಗೆ ಯಾವುದೇ ರೀತಿಯಾದ ನಷ್ಟವಿಲ್ಲ. ಬಿಜೆಪಿಯವರು ಅವರನ್ನು ಆಹ್ವಾನಿಸಿಲ್ಲ. ಅವರೇ ಹೋಗಿ ಪಕ್ಷಕ್ಕೆ ಸೇರಿದ್ದಾರೆ. ನಾವು ರಾಜೀನಾಮೆಯನ್ನು ಅಂಗೀಕರಿಸಿದ್ದೇವೆ ಎಂದಿದ್ದಾರೆ.