ಹೈದರಾಬಾದ್, ಅ. 14 (DaijiworldNews/MB) : ಹೈದರಾಬಾದ್ನಲ್ಲಿ ಕಳೆದ ೨ ದಿನಗಳಿಂದ ನಿರಂತರವಾಗಿ ಭಾರೀ ಮಳೆ ಸುರಿಯುತ್ತಿದ್ದು ನಗರದ ಚಂದ್ರಯಾನಗುಟ್ಟ ಪ್ರದೇಶದಲ್ಲಿ ಭಾರೀ ಬಂಡೆಯೊಂದು ಮನೆಗಳ ಮೇಲೆ ಉರುಳಿದ ಪರಿಣಾಮ 9 ಮಂದಿ ಸಾವನ್ನಪ್ಪಿದ್ದಾರೆ.
ಹಿಮಯತ್ಸಾಗರ ಜಲಾಶಯದ ಎರಡು ಗೇಟ್ಗಳನ್ನು ತೆರೆಯಲಾಗಿದ್ದು ಅಲ್ಲಿಂದ ಮುಸಿ ನದಿಗೆ 1,300 ಕ್ಯೂಸೆಕ್ಸ್ ನೀರು ಬಿಡಲಾಗಿದೆ. ಹಿಮಯತ್ಸಾಗರದಲ್ಲಿ ಒಟ್ಟು 17 ಗೇಟ್ಗಳಿದ್ದು ನೀರಿನ ಒಳಹರಿವು ಹೆಚ್ಚಾದರೆ ಇಂದು ಜಲಾಶಯದ ಮತ್ತಷ್ಟು ಗೇಟ್ಗಳನ್ನು ತೆರೆಯುವ ಸಾಧ್ಯತೆಯಿದೆ. 2010ರಲ್ಲಿ ಇಲ್ಲಿ ಪ್ರವಾಹ ಬಂದು ಇದೇ ರೀತಿ ಗೇಟ್ಗಳನ್ನು ತೆರೆಯಲಾಗಿತ್ತು. ಪ್ರವಾಹದಿಂದಾಗಿ ಹೈದಾರಾಬಾದ್ನ ಹಲವು ಪ್ರದೇಶಗಳು ಜಲಾವೃತವಾಗಿದೆ.
ಇನ್ನು ಹೈದರಾಬಾದ್ನಲ್ಲಿ ಇಂದು ಮತ್ತಷ್ಟು ತೀವ್ರ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ವರದಿ ತಿಳಿಸಿದೆ.